Sitaram Yechury: ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ..!

Sitaram Yechury: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ (Sitaram Yechury) ಅವರು 72ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.  ಹೌದು, ಸೀತಾರಾಂ ಯೆಚೂರಿ ಅವರನ್ನು ಕಳೆದ…

Sitaram Yechury

Sitaram Yechury: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ (Sitaram Yechury) ಅವರು 72ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. 

ಹೌದು, ಸೀತಾರಾಂ ಯೆಚೂರಿ ಅವರನ್ನು ಕಳೆದ ತಿಂಗಳು 19 ರಿಂದ ದೆಹಲಿಯ ಏಮ್ಸ್‌ನ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ಉಸಿರಾಟಕ್ಕಾಗಿ ಬಾಹ್ಯ ಬೆಂಬಲ ವ್ಯವಸ್ಥೆ ಮಾಡಲಾಗಿದೆ ಹಾಗೂ ಅವರ ಸ್ಥಿತಿ ಗಂಭೀರವಾಗಿದೆ ಎಂದು ಕೆಲ ದಿನಗಳ ಹಿಂದೆ ಪಕ್ಷ ಹೇಳಿತ್ತು.

ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯೆಚೂರಿ ನಿಧನ ಕಮ್ಯುನಿಸ್ಟ್ ವಲಯದಲ್ಲಿ ತೀವ್ರ ದುಃಖವನ್ನುಂಟು ಮಾಡಿದ್ದು, ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

Vijayaprabha Mobile App free

ಇದನ್ನು ಓದಿ: PM Kisan ಯೋಜನೆಯ 18ನೇ ಕಂತಿನ ಹಣ ಯಾವಾಗ? ಈ ಕೆಲಸ ಮಾಡಿದರೇ ಮಾತ್ರ ಹಣ..!

Sitaram Yechury : ಕಮ್ಯುನಿಸ್ಟ್ ದಿಗ್ಗಜ ಸೀತಾರಾಂ ಯೆಚೂರಿ ಹೆಜ್ಜೆ ಗುರುತು..

  • 1974ರಲ್ಲಿ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾಗೆ ಸೇರ್ಪಡೆ
  • 1977-78ರಲ್ಲಿ ಮೂರು ಬಾರಿ JNU ಅಧ್ಯಕ್ಷರಾಗಿ ಆಯ್ಕೆ
  • 1978ರಲ್ಲಿ SFIನ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ
  • 1984ರಲ್ಲಿ CPI(M)ನ ಕೇಂದ್ರ ಸಮಿತಿಗೆ ಆಯ್ಕೆ
  • 2015, 18, 22ರ ಚುನಾವಣೆಯಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ನೇಮಕ.

ಇದನ್ನು ಓದಿ: ‘840 ಹೊಸ ಬಿಎಂಟಿಸಿ ಬಸ್‌ಗಳ ಖರೀದಿ’ – ಸಿಎಂ ಸಿದ್ದರಾಮಯ್ಯ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.