PM Kisan ಯೋಜನೆಯ 18ನೇ ಕಂತಿನ ಹಣ ಯಾವಾಗ? ಈ ಕೆಲಸ ಮಾಡಿದರೇ ಮಾತ್ರ ಹಣ..!

PM Kisan : ಪಿಎಂ ಕಿಸಾನ್‌ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) 18ನೇ ಕಂತು ಯಾವಾಗ ಬರುತ್ತದೆ ಎಂದು ರೈತಾಪಿ ವರ್ಗ ಕಾಯುತ್ತಿದೆ. ಇಲ್ಲಿಯವರೆಗೆ ಬರೋಬ್ಬರಿ 17 ಕಂತಿನ…

PM Kisan scheme

PM Kisan : ಪಿಎಂ ಕಿಸಾನ್‌ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) 18ನೇ ಕಂತು ಯಾವಾಗ ಬರುತ್ತದೆ ಎಂದು ರೈತಾಪಿ ವರ್ಗ ಕಾಯುತ್ತಿದೆ. ಇಲ್ಲಿಯವರೆಗೆ ಬರೋಬ್ಬರಿ 17 ಕಂತಿನ ಹಣವು ಫಲಾನುಭವಿ ರೈತರ ಖಾತೆಗೆ (Farmers account) ವರ್ಗಾವಣೆಗೊಂಡಿದೆ. ಸದ್ಯ 18ನೇ ಕಂತು ಬರಬೇಕಿದ್ದು ಎಲ್ಲ ಪ್ರಕ್ರಿಯೆಗಳು ಕೂಡ ಮುಕ್ತಾಯವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಹೌದು, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6,000 ರೂ.ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಸದ್ಯದ ಚರ್ಚೆಯ ಪ್ರಕಾರ 18 ನೇ ಕಂತು ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ರೈತರ ಖಾತೆ ಸೇರಲಿದೆ ಎಂದು ಹೇಳಲಾಗಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನು ಓದಿ: 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್‌ ಭಾರತ್ ಉಚಿತ ವಿಮೆ

Vijayaprabha Mobile App free

PM Kisan : ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯ ; ಈ ಕೆಲಸ ಮಾಡಿದರೇ ಮಾತ್ರ ಹಣ..!

ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಕೇಂದ್ರ ಸರ್ಕಾರವು ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಇದರೊಂದಿಗೆ, ಭೂ ಪರಿಶೀಲನೆಯನ್ನು ಪೂರ್ಣಗೊಳಿಸುವುದು ಸಹ ಕಡ್ಡಾಯವಾಗಿದೆ.

ಈ ಷರತ್ತುಗಳನ್ನು ಪೂರೈಸದ ಫಲಾನುಭವಿಗಳು ಯೋಜನೆಯ ಮುಂದಿನ ಕಂತಿನ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಕೆವೈಸಿ ಪೂರ್ಣಗೊಳಿಸದಿದ್ದರೆ, ಈ ಕಂತಿನಿಂದ ನೀವು ಹಣವನ್ನು ಸ್ವೀಕರಿಸುವುದಿಲ್ಲ.

ಇದನ್ನು ಓದಿ: ಖಾಸಗಿ ವಿಡಿಯೋ ಇಟ್ಟುಕೊಡು ಬ್ಲಾಕ್ ಮೇಲ್ : ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ FIR ದಾಖಲು

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.