Cold Alert | ರಾಜ್ಯದಲ್ಲಿ ಭಾರೀ ಚಳಿಗಾಳಿ; 2 ದಿನ ಜಾಗ್ರತೆ, ಹವಾಮಾನ ಇಲಾಖೆ ಮುನ್ಸೂಚನೆ

Cold Alert : ಬೆಂಗಳೂರು ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ತಾಪಮಾನ ಭಾರೀ ಕುಸಿತ ಕಂಡಿದೆ. ಶನಿವಾರ ಕೆಲ ಭಾಗಗಳಲ್ಲಿ 10.2°C ದಾಖಲಾಗಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದ್ದು, ಮುಂದಿನ 2 ದಿನಗಳಲ್ಲಿ…

COLD ALERT

Cold Alert : ಬೆಂಗಳೂರು ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ತಾಪಮಾನ ಭಾರೀ ಕುಸಿತ ಕಂಡಿದೆ. ಶನಿವಾರ ಕೆಲ ಭಾಗಗಳಲ್ಲಿ 10.2°C ದಾಖಲಾಗಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದ್ದು, ಮುಂದಿನ 2 ದಿನಗಳಲ್ಲಿ ಇದು ಇನ್ನಷ್ಟು ಕುಸಿಯಲಿದೆ ಎಂದು ಎಚ್ಚರಿಕೆ ನೀಡಿದೆ.

ಹೌದು, ಕಳೆದ ವಾರ ರಾಜ್ಯದಲ್ಲಿ ಮಳೆಯ ಆರ್ಭಟದಿಂದ ಕಾಫಿ ಬೆಳೆಗಾರರು ತತ್ತರಿಸಿ ಹೋಗಿದ್ದರು. ಆದರೆ, ಇದೀಗ ರಾಜ್ಯದಲ್ಲಿ ಮೈಕೊರೆವ ಚಳಿ ಆರಂಭವಾಗಿದ್ದು, ಅದರಲ್ಲಿಯೂ ವಿಕೇಂಡ್ ಹೊತ್ತಿನ ಈ ಸಂದರ್ಭದಲ್ಲಿ ಮನೆಯಿಂದ ಹೊರಬರಲು ಆಗದಷ್ಟು ಚಳಿ ಪ್ರಮಾಣ ಹೆಚ್ಚಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಶೀತಗಾಳಿ ಬೀಸಲಿದೆ.

ಇದನ್ನೂ ಓದಿ: Bus ticket price | ಇಂದಿನಿಂದ ಪ್ರಯಾಣಿಸುವ ಜನರಿಗೆ ಬೆಲೆ ಏರಿಕೆ ಶಾಕ್; ನಿಮ್ಮೂರಿಗೆ ಬಸ್‌‌ ಟಿಕೆಟ್‌ ದರ ಏರಿಕೆ ಎಷ್ಟು?

Vijayaprabha Mobile App free

ಬೀದರ್‌, ಕಲಬುರ್ಗಿ & ವಿಜಯಪುರದಲ್ಲಿ ಇನ್ನೆರಡು ದಿನ ಶೀತಗಾಳಿ ಬೀಸುವ ಸಾಧ್ಯತೆಯಿರುವುದರಿಂದ IMD ಕೋಲ್ಡ್‌ ವೇವ್‌ ಎಚ್ಚರಿಕೆಯನ್ನೂ ನೀಡಿದೆ. ಮುಂಜಾನೆ 4 ರಿಂದ 7ರ ಅವಧಿಯಲ್ಲಿ ಚಳಿ ತೀವ್ರತೆ ಹೆಚ್ಚಿರಲಿದೆ. ವಿಜಯಪುರದಲ್ಲಿ ಕನಿಷ್ಠ ಅಂದರೆ 9° C ದಾಖಲಾಗಿದ್ದು, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇದನ್ನೂ ಓದಿ: Airavata scheme | ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸುವ ಐರಾವತ ಯೋಜನೆ; ವಾಹನ ಖರೀದಿಸಲು 5 ಲಕ್ಷ ಸಹಾಯಧನ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.