Bus ticket prices : ಬಸ್ ಪ್ರಯಾಣಿಕರಿಗೆ ದೊಡ್ಡ ಶಾಕ್ ಎದುರಾಗಿದೆ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಪ್ರಯಾಣದರ ಏರಿಕೆಯನ್ನು ಶನಿವಾರ (ನಿನ್ನೆ) ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಹೌದು, ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಸರ್ಕಾರ ಸುಳಿವು ನೀಡುತ್ತಲೇ ಇತ್ತು. ಆದರೆ,ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಸಾರ್ವಜನಿಕರಿಂದ ಹಾಗೂ ಪ್ರತಿಪಕ್ಷಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ: Airavata scheme | ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸುವ ಐರಾವತ ಯೋಜನೆ; ವಾಹನ ಖರೀದಿಸಲು 5 ಲಕ್ಷ ಸಹಾಯಧನ
ಅದರಂತೆ, ಇದೀಗ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಸಾರಿಗೆ ಬಸ್ ಪ್ರಯಾಣ ದರ ಏರಿಕೆಯಾಗಲಿದೆ. ರಾಜ್ಯದ BMTC, KSRTC, NWKRTC, KKRTC ಸೇರಿ ನಾಲ್ಕು ಸಾರಿಗೆ ಬಸ್ ಗಳ ದರ ಏರಿಕೆಯಾಗಲಿದ್ದು, ಶೇಕಡಾ 15 ರಷ್ಟು ಟಿಕೆಟ್ ದರ ಹೆಚ್ಚಳವಾಗಿದ್ದು, ಈ ಪರಿಷ್ಕೃತ ಟಿಕೆಟ್ ದರ ನಿನ್ನೆ(ಶನಿವಾರ) ಮಧ್ಯ ರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಇಂದಿನಿಂದ ಪ್ರಯಾಣಿಸುವ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಕೆಎಸ್‌ಆರ್‌ಟಿಸಿ, ವಾಯುವ್ಯ ಕರ್ನಾಟಕ (NWRTC), ಕಲ್ಯಾಣ ಕರ್ನಾಟಕ (KKRTC) ಬಸ್‌ಗಳಲ್ಲಿ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಕನಿಷ್ಠ ₹11, ಗರಿಷ್ಠ ₹115 ದವರೆಗೆ ಹೆಚ್ಚಳವಾಗಲಿದೆ. ಈ ಮೂಲಕ ₹74.85 ಕೋಟಿ ಹೆಚ್ಚುವರಿ ವರಮಾನ ಸಂಗ್ರಹವಾಗಲಿದೆ. ನಿಮ್ಮೂರಿಗೆ ಬಸ್ ಟಿಕೆಟ್ ದರ ಏರಿಕೆ ಎಷ್ಟು ಹೆಚ್ಚಳವಾಗಿದೆ ತಿಳಿಸಿ.
ಇದನ್ನೂ ಓದಿ: Saving money | ಪ್ರತಿ ತಿಂಗಳು ಹಣ ಉಳಿತಾಯ ಮಾಡುವುದು ಹೇಗೆ? ಇಲ್ಲಿದೆ ಉತ್ತಮ ಸಲಹೆಗಳು