HSRP number plate: ರಾಜ್ಯದಲ್ಲಿ ಎಚ್‌ಎಸ್‌ಆರ್ ಪಿ ನಂಬರ್ ಪ್ಲೇಟ್ (HSRP number plate) ಅಳವಡಿಸಲು ಸರ್ಕಾರ ಮತ್ತು ಕೋರ್ಟ್ ಸೆ. 15ರವರೆಗೆ ಅವಕಾಶ ನೀಡಲಾಗಿದ್ದು, ಎಚ್‌ಎಸ್‌ಆರ್ ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸದ ವಾಹನ ಮಾಲೀಕರು ಸೆ.16 ರಿಂದ ದಂಡ ಪಾವತಿಸಬೇಕಾಗಬಹುದು.
ಹೌದು, ಇಷ್ಟು ದಿನ HSRP ನಂಬರ್ ಪ್ಲೇಟ್ ಅಳವಡಿಸಲು ಸರ್ಕಾರ ಮತ್ತು ಕೋರ್ಟ್ ಗಡುವು ನೀಡಿತ್ತು. ಇದೀಗ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಸೆಪ್ಟೆಂಬರ್ 15ಕ್ಕೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊಟ್ಟಿರುವ ಡೆಡ್‌ಲೈನ್ ಮುಗಿಯಲಿದೆ.
1,000 ರೂವರೆಗೆ ದಂಡ
2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಕಡ್ಡಾಯವಾಗಿದ್ದು, ಸೆ.15ರೊಳಗೆ ಈ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500-1,000 ರೂ. ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಒಟ್ಟಾರೆ 2 ಕೋಟಿಯಷ್ಟು ವಾಹನಗಳಿದ್ದು, ಇಲ್ಲಿಯವರೆಗೆ 51 ಲಕ್ಷ ವಾಹನಗಳು ಮಾತ್ರ HSRP ನಂಬರ್ ಹಾಕಿಸಿದ್ದಾರೆ. ಸೆ.16ರಿಂದಲೇ ಇಲಾಖೆಯಿಂದ ಮೊದಲ ಸಲ 500 ರೂ. ದಂಡ ವಿಧಿಸಿದರೇ ಎರಡನೇ ಸಲಕ್ಕೆ 1,000 ರೂ. ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್; ನಟಿ ರಾಗಿಣಿ, ಶುಭಾಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್