Renukaswamy murder case: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy murder case) ಸಂಬಂಧಿಸಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಪೋಲೀಸರು ಕೋರ್ಟಿಗೆ ಚಾರ್ಜ್ ಶೀಟ್ (charge sheet) ಸಲ್ಲಿಸಿದ್ದು, ಚಾರ್ಜ್ ಶೀಟ್ ನಲ್ಲಿರುವ ಒಂದೊಂದು ವಿಷಯಗಳು ಕೂಡ ಆಘಾತಕಾರಿ ಯಾಗಿವೆ.
ಹೌದು, ರೇಣುಕಾಸ್ವಾಮಿಯು ಪವಿತ್ರಾ ಗೌಡ ಹೊರತಾಗಿ ಕನ್ನಡದ ಪ್ರಮುಖ ನಟಿಯರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದನು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.
ನಟಿ ರಾಗಿಣಿ, ಶುಭಾಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್
ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿ ಕೋರ್ಟಿಗೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ವಿಷಯ ಬಯಲಾಗ್ತಿವೆ. ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಮಾತ್ರ ಮೆಸೇಜ್ ಕಳುಹಿಸಿರಲಿಲ್ಲ. ಕನ್ನಡದ ಸ್ಟಾರ್ ನಟಿಯರಿಗೂ ಅವನು ಅಶ್ಲೀಲ ಮೆಸೇಜ್ ಕಳುಹಿಸಿದ್ದ ಅನ್ನೋದು ಬಯಲಾಗಿದೆ.
ಪೊಲೀಸರ ವಿಚಾರಣೆ ವೇಳೆಯಲ್ಲಿ ಪ್ರದೋಶ್ &ವಿನಯ್, ರೇಣುಕಾಸ್ವಾಮಿ ಮೊಬೈಲ್ ನಲ್ಲಿ ನಾವು ರಾಗಿಣಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ಅಶ್ಲೀಲ ಮಸೇಜ್ ಕಳುಹಿಸಿದ್ದನ್ನು ನಾವು ನೋಡಿದ್ದೇವೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಅವರ ಮಾತುಗಳನ್ನು ಚಾರ್ಜ್‌ಶೀಟ್‌ನಲ್ಲೂ ದಾಖಲಿಸಲಾಗಿದೆ. ಜೂನ್ 8ರಂದು ರೇಣುಕಾಸ್ವಾಮಿ ಕೊಲೆಯಾಗಿತ್ತು.