ಬೆಂಗಳೂರು: ಖ್ಯಾತ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ, ಬಿಗ್ ಬಾಸ್ ಸ್ಪರ್ದಿ ರವಿ ಬೆಳಗೆರೆ (62) ಅವರು ಗುರುವಾರ ತಡರಾತ್ರಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಹೃದಯಾಘಾತ ಒಳಗಾದ ರವಿ ಬೆಳೆಗೆರೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರವಿ ಬೆಳಗೆರೆ ಅವರು ಇಬ್ಬರು ಪತ್ನಿಯರಾದ ಲಲಿತಾ, ಯಶೋಮತಿ, ಮಕ್ಕಳಾದ ಚೇತನಾ,ಹಿಮವಂತ ಭಾವನ ಮತ್ತು ಕರ್ಣ ಸೇರಿದಂತೆ ಅಪಾರ ಅಭಿಮಾನಿಗಳನ್ನು ಸಹ ಅಗಲಿದ್ದಾರೆ. ರವಿ ಬೆಳೆಗೆರೆ ಅವರ ಪಾರ್ಥಿವ ಶರೀರವನ್ನು ಇಂದು ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ.
ರವಿ ಬೆಳೆಗೆರೆ ಅವರು ಹಾಯ್ ಬೆಂಗಳೂರು ಮತ್ತು 15 ದಿನದ ಓ ಮನಸೇ ಮ್ಯಾಗಜಿನ್ ಸಂಪಾದಕರಾಗಿದ್ದರು. ರವಿಬೆಳೆಗೆರೆ ಅವರು 1984ರಲ್ಲಿ ಬೆಂಗಳೂರಿಗೆ ಬರುವ ಮೊದಲು, ಬಳ್ಳಾರಿ, ಹಾಸನ ಹಾಗು ಹುಬ್ಬಳ್ಳಿಯಲ್ಲಿ ಇತಿಹಾಸ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು.
ರವಿ ಬೆಳೆಗೆರೆ ಅವರು ಭೂಗತ ಜಗತ್ತಿನ ಕುರಿತಾದ ಪಾಪಿಗಳ ಲೋಕದಲ್ಲಿ ಹೊರತಾಗಿಯೂ ಲವ ಲವಿಕೆ, ಬಾಟಮ್ ಐಟಂ ಕಾಸ್ ಬಾತ್ ನಂತಹ ಅಂಕಣಗಳನ್ನು ಸಹ ಪರಿಚಯಿಸಿದ್ದರು.