ಆಹಾರವಾಗಿ ಬಳಸಿದರೂ ಅತ್ಯುತ್ತಮು ಔಷಧೀಯ ಗುಣಗಳಿರುವ ನುಗ್ಗೆ ಒಂದು ಸಣ್ಣ ಮರ ಕಾಂಡವನ್ನು ನೆಡುವುದರ ಮೂಲಕ ಎಲ್ಲಾ ಕಡೆಗಳಲ್ಲಿಯೂ ಬೆಳೆಸಬಹುದಾದ ನುಗ್ಗೆ ನೆಟ್ಟ 3-6 ತಿಂಗಳುಗಳಲ್ಲಿ ಉಪಯೋಗಿಸಲು ಯೋಗ್ಯವಾದ ಸೊಪ್ಪನ್ನು ಕೊಡುತ್ತದೆ. ನುಗ್ಗೆ ಪೌಷ್ಟಿಕಾಂಶಗಳ ಆಗರ. ಮಕ್ಕಳ ಬೆಳವಣಿಗೆಗೆ ಬೇಕಾದ ‘ಎ’, ‘ಸಿ’ ಅನ್ನಾಂಗ ಕ್ಯಾಲ್ಸಿಯಂಗಳನ್ನು ಧಾರಾಳವಾಗಿ ಪಡೆದಿರುವ ಸಸ್ಯ. ಈ ಅಂಶಗಳ ಸಿರಿವಂತಿಕೆ ಎಷ್ಟಿದೆಯೆಂದರೆ,
1 ಕಪ್ ಎಲೆಯ ರಸವು ‘ಎ’ ಅನ್ನಾಂಗವನ್ನು ಎಷ್ಟು ನೀಡುತ್ತದೆಯೆಂದರೆ ಅಷ್ಟು ಪಡೆಯಲು 9 ಮೊಟ್ಟೆ ಅಥವಾ 1 ಕಪ್‌ನಷ್ಟು ಬಾದಾಮಿ ಅಥವಾ 80 ಕಪ್ ಹಾಲು ಸೇವಿಸಬೇಕಾಗುತ್ತದೆ.
ಅಂತೆಯೇ ‘ಸಿ’ ಅನ್ನಾಂಗ ಪಡೆಯಲು 6 ಕಿತ್ತಳೆ, 8 ಸೇಬು, 6 ನಿಂಬೆ, 16 ಬಾಳೆಹಣ್ಣು, 20 ಮಾವಿನ ಹಣ್ಣುಗಳನ್ನು ತಿನ್ನಬೇಕು.
1 ಮುಷ್ಟಿಯಷ್ಟು ಎಲೆಯು ನೀಡುವ ಕ್ಯಾಲ್ಸಿಯಂ ಅಂಶ 900 ಗ್ರಾಂ ಬಾದಾಮಿ, 8 ಕಿತ್ತಾಳ ಮೂರುವರೆ ಕಿ.ಗ್ರಾ ಪರಂಗಿ ಹಣ್ಣಿಗೆ ಸಮಾನ. ಇದನ್ನು ಆಹಾರದಲ್ಲಿ ತರಕಾರಿಯಂತೆ ಸೇವಿಸುವುದರಿಂದ ಇರುಳುಗಣ್ಣನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.
ನುಗ್ಗೆಯ ಉಪಯೋಗಗಳು
1. 1 ಟೀ ಚಮಚ ಎಲೆಯ ರಸಕ್ಕೆ ಅಷ್ಟೇ ಜೇನುತುಪ್ಪವನ್ನು ಸೇರಿಸಿ | ಕಪ್‌ನಷ್ಟು ಎಳೆ ನೀರಿನೊಂದಿಗೆ 2-3 ಬಾರಿ ಸೇವಿಸಿದರೆ ಕಾಲರಾ, ಭೇದಿ, ಆಮಶಂಕೆ ಭೇದಿ, ಕಾಮಾಲೆ ನಿವಾರಣೆಯಾಗುತ್ತದೆ.
2. ಸೊಪ್ಪನ್ನು ಹಿಂಡಿ ಬರುವ ರಸವನ್ನು ಮೃದುವಾದ ಅಗ್ನಿಯಲ್ಲಿ ಬಿಸಿ ಮಾಡಿ ಬರುವ ತಿಳಿಯಾದ ನೀರನ್ನು (1 ಚಮಚದಷ್ಟು) ಸ್ವಲ್ಪ ಹಾಲು ಸೇರಿಸಿ ಮಕ್ಕಳಿಗೆ ದಿನಕ್ಕೆ ಒಂದಾವರ್ತಿ ನೀಡಿದರೆ ಬೆಳವಣಿಗೆ ಉತ್ತಮವಾಗುವುದಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
3. ಎಲೆಯ ರಸವನ್ನು ರಾಗಿಹಿಟ್ಟಿನೊಂದಿಗೆ ಕಲಸಿ ರೊಟ್ಟಿ ಮಾಡಿ ಎಲೆಯ ಮತ್ತು ಹೆಸರು ಕಾಳಿನ ಪಲ್ಯದೊಂದಿಗೆ ಸೇವಿಸಲು ದೃಷ್ಟಿ ಶಕ್ತಿ ಉತ್ತಮವಾಗುತ್ತದೆ.
4. ನುಗ್ಗೆಯ ಎಳೆಯ ಕಾಯಿಗಳನ್ನು ಹೆಚ್ಚಾಗಿ ಉಪಯೋಗಿಸಲು ಹೊಟ್ಟೆಯಲ್ಲಿ ಜಂತು ಹುಳು ಮತ್ತು Pin worm ಗಳನ್ನು ತಡೆಗಟ್ಟಬಹುದು. ಈ ಕಾಯಿಗಳನ್ನು ಬೇಯಿಸಿ ಬರುವ ರಸವನ್ನು ಲಕ್ವ, ಮುಖದ ಲಕ್ವ ಮುಂತಾದ ವಾತರೋಗದಲ್ಲಿ ಔಷಧಿ ಪಥ್ಯವಾಗಿ ಉಪಯೋಗಿಸಬಹುದು.
ಇದನ್ನು ಓದಿ: ಉತ್ತಮ ಸೌಂದರ್ಯ ಮತ್ತು ಆರೋಗ್ಯಕ್ಕೆ ಮನೆ ಮದ್ದಾದ ಲೋಳೆಸರದ ಮಹತ್ವ