ಬೆಂಗಳೂರು: ಕೋವಿಡ್ ಲಸಿಕೆ ತಯಾರಿಕೆಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಫಾರ್ಮಾ ಕಂಪನಿ ಆಸ್ಟ್ರೊಜೆನಿಕಾ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿರುವ ಕೋವ್‌ಶೀಲ್ಡ್ ಲಸಿಕೆ ಸುಮಾರು 4 ಕೋಟಿ ಲಸಿಕೆಗಳನ್ನು ಈಗಾಗಲೇ ಸಿದ್ದಪಡಿಸಲಾಗಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಗುರುವಾರ ತಿಳಿಸಿದೆ. ಸರ್ಕಾರದ ನಿಯಂತ್ರಕರ ಅನುಮೋದನೆ ಸಿಕ್ಕರೆ ನೊವಾವಾಕ್ಸ್ ಲಸಿಕೆ ತಯಾರಿಸಲು ಸಹ ಪ್ರಾರಂಭಿಸುವುದಾಗಿ ಸೀರಮ್ ಸಂಸ್ಥೆ ಹೇಳಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಅಸ್ಟ್ರಾಜೆನೆಕಾ ಜಂಟಿಯಾಗಿ ತಯಾರಿಸುತ್ತಿರುವ ಕೋವಿಶೀಲ್ಡ್ ಲಸಿಕೆ ಪ್ರಯೋಗಗಳು ಅಂತಿಮ ಹಂತದಲ್ಲಿವೆ.
ಲಸಿಕೆ ಕಾರ್ಯಕ್ಷಮತೆಯ ಬಗ್ಗೆ ಆರಂಭಿಕ ಫಲಿತಾಂಶಗಳನ್ನು ಅಸ್ಟ್ರಾಜೆನೆಕಾ ತಯಾರಿ ನಡೆಸುತ್ತಿದ್ದ ಸಮಯದಲ್ಲಿ ಯುಕೆ ನಲ್ಲಿ ಬೇಸಿಗೆಯ ಕಾರಣ ಕೋವಿಡ್ ಪ್ರಕರಣಗಳು ಕ್ಷೀಣಿಸಲು ಪ್ರಾರಂಭಿಸಿದವು. ಲಸಿಕೆ ವಿತರಣೆಯನ್ನು ಮುಂದೂಡುವುದಾಗಿ ಕಂಪನಿ ಕಳೆದ ವಾರವೇ ಹೇಳಿತ್ತು. ಈ ಹಿನ್ನೆಲೆಯಲ್ಲಿ, ಆಸ್ಟ್ರೊಜೆನಿಕಾ ಲಸಿಕೆಗಾಗಿ ಭಾರತದಲ್ಲಿ ತಯಾರಾಗುತ್ತಿರುವ ನಾಲ್ಕು ಕೋಟಿ ಡೋಸ್ ತಯಾರಿಸಲಾಗಿದೆ ಎಂದು ಸೀರಮ್ ಸಂಸ್ಥೆ ಪ್ರಕಟಿಸಿರುವುದು ಗಮನಾರ್ಹವಾಗಿದೆ.