ವಿದ್ಯಾರ್ಥಿ ವೇತನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 2024-25ನೇ ಸಾಲಿನ ಅರ್ಹ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ(Student scholarship application)ಮತ್ತುಇತರೆ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಧನಸಹಾಯ ಪಡೆಯಲು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ (SSP) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇತ್ಯಾದಿ ವಿವರವಣೆಯನ್ನು ತಿಳಿಸಲಾಗಿದೆ.

last date- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅನ್ಲೈನ್ ಮೂಲಕ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು 30 ನವೆಂಬರ್ 2024 ಕೊನೆಯ ದಿನವಾಗಿರುತ್ತದೆ.

Advertisement

ಇದನ್ನು ಓದಿ: ಗೃಹಲಕ್ಷ್ಮಿಯರಿಗೆ ಶಾಕಿಂಗ್‌ ಸುದ್ದಿ.. ಇವರಿಗೆ ಬರಲ್ಲ 2 ಸಾವಿರ ರೂ..!

Student scholarship amount details-ಎಷ್ಟು ಸಹಾಯಧನ ಪಡೆಯಬಹುದು?

1) ಪ್ರೌಢಶಾಲೆಗಳಿಗೆ (8ನೇ ತರಗತಿಯಿಂದ 10ನೇ ತರಗತಿವರೆಗೆ) ರೂ.3,000/-

2) PUC/ITI/Dip./TCH ಕೋರ್ಸ್‌ ಗಳಿಗೆ ರೂ. 4,000/- ಪದವಿ ಕೋರ್ಸ್‌ಗಳಿಗೆ ರೂ. 5,000/-

3) ಸ್ನಾತಕೋತ್ತರ ಕೋರ್ಸ್‌ಗಳಿಗೆ ರೂ. 6,000/-

4) ಎಂಜಿನಿಯರಿಂಗ್/ವೈದ್ಯಕೀಯ ಕೋರ್ಸ್‌ಗಳು ರೂ. 10,000/- ನೀಡಲಾಗುತ್ತದೆ.

ವಿಶೇಷ ಸೂಚನೆ: ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 50% ಮತ್ತು SC/ST ವರ್ಗದ ಅಭ್ಯರ್ಥಿಗಳಿಗೆ 45% ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಕುಟುಂಬಕ್ಕೆ ಒಬ್ಬ ವಿದ್ಯಾರ್ಥಿಗೆ ಸಹಾಯವನ್ನು ನೀಡಲಾಗುತ್ತದೆ.

ಇದನ್ನು ಓದಿ: ಅಪರೂಪದ ಸಾಧನೆ ಬರೆದ ಅಶ್ವಿನ್; ಸಾಲು ಸಾಲು ದಾಖಲೆ

Student scholarship online application-ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ವೆಬ್ಸೈಟ್ ಲಿಂಕ್ ಅನ್ನು ಬಳಕೆ ಮಾಡಿಕೊಂಡು SSP ತಂತ್ರಾಂಶವನ್ನು ಪ್ರವೇಶ ಮಾಡಿ ತಮ್ಮ ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈಗಾಗಲೇ ಈ ವೆಬ್ಸೈಟ್ ನಲ್ಲಿ ಖಾತೆಯನ್ನು ರಚನೆ ಮಾಡಿಕೊಂಡವರು ನೇರವಾಗಿ ಲಾಗಿನ್ ಡಿಟೈಲ್ಸ್ ಅನ್ನು ಹಾಕಿ ಲಾಗಿನ್ ಅಗಿ ಅರ್ಜಿ ಸಲ್ಲಿಸಬಹುದು ಅಥವಾ ಇಲ್ಲಿಯವರಿಗೆ ಖಾತೆಯನ್ನು ರಚನೆ ಮಾಡಿಕೊಳ್ಳದವರು ಖಾತೆಯನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: “Login” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ ಲಾಗಿನ್ ಅದ ಬಳಿಕ ಇಲ್ಲಿ ಅವಶ್ಯವಿರುವ ವಿವರವನ್ನು ಭರ್ತಿ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ್ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗುತ್ತದೆ.

ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ನಿಮಗೆ ಸರಿಯಾಗಿ ಮಾಹಿತಿ ಗೊತ್ತಾಗದೇ ಇದ್ದ ಪಕ್ಷದಲ್ಲಿ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ: ಮನೆ ಇಲ್ಲದವರಿಗೆ ಸಿಹಿಸುದ್ದಿ: ವಕ್ಫ್ ಬೋರ್ಡ್‍ನಿಂದ ಬಡ ಕುಟುಂಬಗಳಿಗೆ ಮನೆ ಭಾಗ್ಯ

Documents for student scholarship-ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು:

1) ಅರ್ಜಿದಾರರ ಅಧಾರ್ ಕಾರ್ಡ ಪ್ರತಿ.2) ಬ್ಯಾಂಕ್ ಪಾಸ್ ಬುಕ್.3) ಲೇಬರ್ ಕಾರ್ಡ.4) ವ್ಯಾಸಂಗ ಪ್ರಮಾಣ ಪತ್ರ.5) ಅಂಕಪಟ್ಟಿ.6) ಫೋಟೋ.

ಇದನ್ನೂ ಓದಿ:  Tour packages-ಸರ್ಕಾರದಿಂದ ರೂ 15,000 ಸಾವಿರ ಸಹಾಯಧನದಲ್ಲಿ ಯಾತ್ರೆ ಮಾಡಲು ಅರ್ಜಿ!

ಮಂಡಳಿಯಿಂದ ವಿಶೇಷ ಸೂಚನೆಗಳು:

1) ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಶೈಕ್ಷಣಿಕ ಧನಸಹಾಯವನ್ನು ಎಸ್‍ಎಸ್‍ಪಿ ತಂತ್ರಾಂಶದ ಮೂಲಕ ಪಡೆಯಲು ಜಾಲತಾಣ https://kbocwwb.karnataka.gov.in/   ಉಪಯೋಗಿಸಿಕೊಂಡು ಮಂಡಳಿಯ ತಂತ್ರಾಂಶದಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಆಧಾರ್ ಲಿಂಕ್ ಮಾಡಬೇಕು. ಎಸ್‍ಎಸ್‍ಪಿ ತಂತ್ರಾಂಶದ ಮೂಲಕ ಶೈಕ್ಷಣಿಕ ಧನಸಹಾಯ ಪಡೆಯಲು ಇದು ಅತ್ಯವಶ್ಯಕವಾಗಿರುವುದರಿಂದ ಈಗಾಗಲೇ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದೇ ಇರುವ ಎಲ್ಲಾ ಕಾರ್ಮಿಕರು ಕೂಡಲೇ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ನೋಂದಣಿ ಮಾಡಿ ಎನ್‍ಪಿಸಿಐ ಮ್ಯಾಪಿಂಗ್ ಮಾಡಿಸಬೇಕಿರುತ್ತದೆ.

2) 2024-25ನೇ ಸಾಲಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ (ಎಸ್‍ಎಸ್‍ಪಿ) ಮೂಲಕ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.

useful website link- ಸಂಬಂಧಪಟ್ಟ ಉಪಯುಕ್ತ ವೆಬ್ಸೈಟ್ ಲಿಂಕ್:

SSP Portal- https://ssp.postmatric.karnataka.gov.in/

karmika mandali website- https://kbocwwb.karnataka.gov.in/   

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು