Gruhalakshmi yojana : ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಬಂದಿದ್ದು, ಯೋಜನೆಯ ಮಾನದಂಡಗಳನ್ನು ಉಲ್ಲಂಘನೆ ಮಾಡಿ ಹಣ ಪಡೆಯುತ್ತಿರುವವರಿಗೆ ಸಂಕಷ್ಟ ಎದುರಾಗುವುದು ಫಿಕ್ಸ್…
ಹೌದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ನಿರ್ದೇಶನದಂತೆ e-Governance ಮೂಲಕ ಅನರ್ಹ ಫಲಾನುಭವಿಗಳ ಲಿಸ್ಟ್ ಮಾಡಿಸಲಾಗಿದೆಯಂತೆ. ಸ್ಕೀಂಗೆ ಅರ್ಹ ಅಲ್ಲದವರಿಗೆ ಅಧಿಕೃತವಾಗಿ ಹಿಂಬರಹ ನೀಡಲು ಯೋಜಿಸಲಾಗುತ್ತಿದೆ ಎಂದು ಹೇಳಲಾಗಿದೆ. ಸಣ್ಣ ಉದ್ದಿಮೆ ಮಾಡಿಕೊಂಡು GST ನಂಬರ್ ಪಡೆದವರಿಗೂ ಕೂಡ ಇದರ ಎಫೆಕ್ಟ್ ತಟ್ಟಲಿದೆ.
ಇದನ್ನು ಓದಿ: ಅಪರೂಪದ ಸಾಧನೆ ಬರೆದ ಅಶ್ವಿನ್; ಸಾಲು ಸಾಲು ದಾಖಲೆ
Gruhalakshmi yojana : ಆದಾಯ ತೆರಿಗೆ ಪಾವತಿಸುವ 1.78 ಲಕ್ಷ ಗೃಹಿಣಿಯರಿಗೆ 2 ಸಾವಿರ ರೂ ಕಟ್
ಆದಾಯ ತೆರಿಗೆ ಪಾವತಿಸುವ 1.78 ಲಕ್ಷ ಗೃಹಿಣಿಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡಲಾಗುವ ₹2000 ಜಮೆ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಅರ್ಹರಲ್ಲ ಎಂದು ರಾಜ್ಯ ಸರ್ಕಾರ ಯೋಜನೆ ಆರಂಭಿಸುವಾಗಲೇ ಹೇಳಿತ್ತು. ಈ ಬಾರಿ ಆದಾಯ ತೆರಿಗೆ ಪಾವತಿಸಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿಯಲು ರಾಜ್ಯ ಸರ್ಕಾರ ದಾಖಲೆ ಪರಿಶೀಲನೆಗೆ ಆದೇಶಿಸಿದೆ.
ಇದನ್ನು ಓದಿ: ಮನೆ ಇಲ್ಲದವರಿಗೆ ಸಿಹಿಸುದ್ದಿ: ವಕ್ಫ್ ಬೋರ್ಡ್‍ನಿಂದ ಬಡ ಕುಟುಂಬಗಳಿಗೆ ಮನೆ ಭಾಗ್ಯ