ವಾಹನ ಸವಾರರಿಗೆ ಬಿಗ್‌ ಶಾಕ್..! 500 ದಂಡ, ತೆರಿಗೆ ವಂಚಿಸಿದರೆ ಸಿಐಡಿ ತನಿಖೆ..!

ಇನ್ಮುಂದೆ ವಾಹನಗಳಲ್ಲಿ ಎಲ್ ಇಡಿ ದೀಪ ಬಳಸುತ್ತಿರುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಸಿದ್ದಾರೆ. ಹೌದು, ಈ ಕುರಿತು ಮಾತನಾಡಿರುವ ಸಚಿವ ಶ್ರೀರಾಮುಲು ವಾಹನಗಳಲ್ಲಿ LED ದೀಪ ಬಳಸುವ…

ಇನ್ಮುಂದೆ ವಾಹನಗಳಲ್ಲಿ ಎಲ್ ಇಡಿ ದೀಪ ಬಳಸುತ್ತಿರುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಸಿದ್ದಾರೆ.

ಹೌದು, ಈ ಕುರಿತು ಮಾತನಾಡಿರುವ ಸಚಿವ ಶ್ರೀರಾಮುಲು ವಾಹನಗಳಲ್ಲಿ LED ದೀಪ ಬಳಸುವ ಸವಾರರಿಗೆ ಮೋಟಾರು ವಾಹನ ಕಾಯ್ದೆಯ ಕಲಂ 177ರಡಿ ಪ್ರಕರಣ ದಾಖಲಿಸಿ, 500 ರೂ ದಂಡ ವಿಧಿಸುವುದಾಗಿ ತಿಳಿಸಿದ್ದಾರೆ.

ಇನ್ನು, ಐಷಾರಾಮಿ ವಾಹನಗಳ ನೋಂದಣಿಯಲ್ಲಾಗುತ್ತಿರುವ ಅಕ್ರಮ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟುಮಾಡುತ್ತಿದ್ದು, ತೆರಿಗೆ ವಂಚಿಸಿದರೆ ಸಿಐಡಿ ತನಿಖೆ ಮಾಡಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಸಿದ್ದಾರೆ. .

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.