labor card: ಉಚಿತ ಯೋಜನೆಗೆ ಈ ಕಾರ್ಡ್‌ ಕಡ್ಡಾಯ; ಇವರಿಗೆ ಸಿಗುತ್ತೆ ಮಾಸಿಕ ಪಿಂಚಣಿ 3,000 ರೂ!

labor card: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸದಸ್ಯತ್ವ ಪಡೆದಿರುವ ಕಾರ್ಮಿಕರಿಗೆ ಹಲವು ಸೌಲಭ್ಯಗಳಿವೆ. ವೈದ್ಯಕೀಯ ಸಹಾಯಧನ, ಪಿಂಚಣಿ ಸೌಲಭ್ಯ, ತಾಯಿ ಮಗು ಸಹಾಯ ಹಸ್ತ, ಮದುವೆ ಪ್ರೋತ್ಸಾಹಧನ,…

Labor Card

labor card: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸದಸ್ಯತ್ವ ಪಡೆದಿರುವ ಕಾರ್ಮಿಕರಿಗೆ ಹಲವು ಸೌಲಭ್ಯಗಳಿವೆ. ವೈದ್ಯಕೀಯ ಸಹಾಯಧನ, ಪಿಂಚಣಿ ಸೌಲಭ್ಯ, ತಾಯಿ ಮಗು ಸಹಾಯ ಹಸ್ತ, ಮದುವೆ ಪ್ರೋತ್ಸಾಹಧನ, ಶೈಕ್ಷಣಿಕ ಸಹಾಯಧನ ಸೇರಿದಂತೆ ಹಲವು ಯೋಜನೆಗಳಿವೆ. ಈ ಎಲ್ಲಾ ಯೋಜನೆಗಳನ್ನು ಒಂದೇ ಕಾರ್ಡ್‌ (ಲೇಬರ್ ಕಾರ್ಡ್) ಮೂಲಕ ಪಡೆದುಕೊಳ್ಳಬಹುದು. ಸದಸ್ಯರು ನಿಗಮದ ಅಧಿಕೃತ ವೆಬ್‌ ಸೈಟ್‌ಗೆ ಭೇಟಿ ನೀಡಿ, ಫಾರ್ಮ್‌ ಹಾಗೂ ಅಗತ್ಯ ದಾಖಲೆಗಳನ್ನು ನೀಡಿ ಈ ಕಾರ್ಡ್‌ ಪಡೆದು ಉಚಿತ ಸೌಲಭ್ಯ ಪಡೆಯಬಹುದು.

labor card: ಇವರಿಗೆ ಸಿಗುತ್ತೆ ಮಾಸಿಕ ಪಿಂಚಣಿ 3,000 ರೂ!

Labor Card
labor card

ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗಾಗಿ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ. 60 ವರ್ಷ ಪೂರೈಸಿದ ಕಟ್ಟಡ ಕಾರ್ಮಿಕರು ಮಾಸಿಕ ₹ 3,000 ರೂ. ಪಿಂಚಣಿ ಪಡೆಯುವುದು ಈಗ ಇನ್ನಷ್ಟು ಸರಳವಾಗಿದೆ. ಮಂಡಳಿಯಲ್ಲಿ ಕನಿಷ್ಠ 3 ವರ್ಷ ನಿರಂತರವಾಗಿ ಸದಸ್ಯತ್ವ ಹೊಂದಿದವರು ಲೇಬರ್ ಕಾರ್ಡ್ (Labor Card) ಪಡೆಯಲು ಸೇವಾಸಿಂದು ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆಯಬಹುದು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಈ ಯೋಜನೆಯಡಿ ಈ ಸೌಲಭ್ಯವನ್ನು ಕಾರ್ಮಿಕರು ಪಡೆದುಕೊಳ್ಳಬಹದು.

ಇದನ್ನು ಓದಿ: ಜುಲೈ 19ರಂದು ಗೃಹಲಕ್ಷ್ಮೀ ಯೋಜನೆ ಜಾರಿ; ಈ ಯೋಜನೆಗೆ ಯಾರು ಅರ್ಹರು? ನಿಮ್ಮ ಮನೆ ಬಾಗಲಿಗೆ ಬರ್ತಾರೆ ಇವ್ರು !

Vijayaprabha Mobile App free

labor card: ಕಾರ್ಮಿಕರು ಪಿಂಚಣಿ ಪಡೆಯಲು ಅರ್ಹತೆಗಳೇನು?

  • 60 ವರ್ಷ ಪೂರೈಸಿದ ಕಟ್ಟಡ ಕಾರ್ಮಿಕರು ಪಿಂಚಣಿ ಪಡೆಯುವುದು ಈ ಇನ್ನಷ್ಟು ಸುಲಭ. ಆದರೆ, ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
  • ಈಗ ಸೌಲಭ್ಯ ಪಡೆಯಲು; ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರಾಗಿದ್ದು. 3 ವರ್ಷ ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿರಬೇಕು, ಫಲಾನುಭವಿಯು 60 ವರ್ಷ ಪೂರೈಸಿರಬೇಕು.
  • ಈ ಅರ್ಹತೆಯುಳ್ಳ ಕಾರ್ಮಿಕರಿಗೆ ತಿಂಗಳಿಗೆ 3, 000 ಸಾವಿರ ರೂ. ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಇದನ್ನು ಓದಿ: ಕೇಂದ್ರದಿಂದ ಗಂಡ-ಹೆಂಡತಿಗೆ ವಾರ್ಷಿಕ ರೂ.72 ಸಾವಿರ; ತಿಂಗಳಿಗೆ ರೂ. 200 ಕಟ್ಟಿದರೆ ಸಾಕು..!

labor card: ಕಟ್ಟಡ ಕಾರ್ಮಿಕರ ನೋಂದಾಣಿ ಮತ್ತು ರಿನೆವಲ್ಗೆ ಬೇಕಾಗುವ ದಾಖಲಾತಿಗಳು

  • ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಫೋಟೊ ಒಂದು
  • ವೋಟರ್ ಐಡಿ
  • ನಾಮಿನಿ ಆಧಾರ್
  • ಮಕ್ಕಳ ಆಧಾರ್ ಕಾರ್ಡ್

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.