Pradhan Mantri Matru Vandana Yojana । ಸಾಮಾನ್ಯ ಜನರನ್ನು ಆರ್ಥಿಕವಾಗಿ ಬಲಪಡಿಸಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ತ೦ದಿದೆ. ಈ ಯೋಜನೆಗಳಲ್ಲಿ ಒಂದು ಪ್ರಧಾನ ಮ೦ತ್ರಿ ಮಾತೃ ವಂದನಾ ಯೋಜನೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯ೦ದಿರಿಗೆ ಸರ್ಕಾರವು ಒದಗಿಸುವ ಯೋಜನೆಯಾಗಿದೆ. ಚಿಕಿತ್ಸೆ ಮತ್ತು ಔಷಧಿಗಳ ವೆಚ್ಚಕ್ಕೆ ಸಹಾಯ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈಗ ಈ ಯೋಜನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಈ ಯೋಜನೆ ಏನು?
ಕೇಂದ್ರ ಸರ್ಕಾರವು ಜನವರಿ 1, 2017 ರಂದು ‘ಮಾತೃತ್ವ ವಂದನಾ ಯೋಜನೆ’ (PMMVY) ಅನ್ನು ಪ್ರಾರಂಭಿಸಿದ್ದು, ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜಾರಿಗೆ ತ೦ದಿದೆ. ಇದರಡಿ ಸರ್ಕಾರವು ಗರ್ಭಿಣಿಯರಿಗೆ ಆರ್ಥಿಕ ನೆರವು ನೀಡುತ್ತದೆ. ನವಜಾತ ಶಿಶುಗಳ ಆರೈಕೆ, ರೋಗಗಳ ತಡೆಗಟ್ಟುವಿಕೆ & ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟುವಿಕೆಗಾಗಿ ಸರ್ಕಾರವು ₹5000 ನೀಡುತ್ತದೆ. ಈ ಯೋಜನೆಗೆ ಗರ್ಭಿಣಿಯರು 19 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
ಮಹಿಳೆಯರ ಖಾತೆಗೆ ₹5,000 ವರ್ಗಾವಣೆ
ಈ ಯೋಜನೆಯಡಿಯಲ್ಲಿ, ಪ್ರತಿ ವರ್ಷ ₹5000 ಅನ್ನು ಈ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಈ ₹5000 ಅನ್ನು ನೇರವಾಗಿ ಮೂರು ಕಂತುಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಇತ್ತೀಚೆಗೆ ಗರ್ಭಿಣಿಯಾದ ಮಹಿಳೆಯರಿಗೆ ₹3,000 & ಹೆರಿಗೆಯ ಮೊದಲ 14 ವಾರಗಳವರೆಗೆ ₹2,000 ಅನ್ನು ಎರಡು ಕಂತುಗಳಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ.
ಮಗು ಜನಿಸಿದರೆ ತಾಯಿಗೆ ₹6,000
ಅಷ್ಟೇ ಅಲ್ಲ, ಇದು ಎರಡನೇ ಹೆರಿಗೆಗೂ ಅನ್ವಯಿಸುತ್ತದೆ. ಎರಡನೇ ಹೆರಿಗೆಯಲ್ಲಿ ಮಗು ಜನಿಸಿದರೆ, ತಾಯಿಗೆ ₹6,000 ನೀಡಲಾಗುತ್ತದೆ ಎ೦ದು ಕೇ೦ದ್ರ ಹೇಳಿದೆ. ಹೀಗಾಗಿ, ಕೇಂದ್ರದಿಂದ ಗರ್ಭಿಣಿಯರಿಗೆ ಒಟ್ಟು ₹11,000 ಅನ್ನು ಆರ್ಥಿಕ ಸಹಾಯವಾಗಿ ನೀಡಲಾಗುತ್ತಿದೆ. ದೈನಂದಿನ ವೇತನ ಪ್ರಮಾಣದಲ್ಲಿ ಕೆಲಸ ಮಾಡುವ ಅಥವಾ ಆರ್ಥಿಕ ಸ್ಥಿತಿ ತು೦ಬಾ ದುರ್ಬಲವಾಗಿರುವ ಮಹಿಳೆಯರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಯೋಜನೆಗೆ ಸೇರುವುದು ಹೇಗೆ?
ಈ ಯೋಜನೆಗೆ ಸೇರಲು, ನೀವು ನೇರವಾಗಿ ಆನ್ ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಇಲ್ಲದಿದ್ದರೆ, ನಿಮ್ಮ ಆಶಾ ಕಾರ್ಯಕರ್ತೆ ನಿಮ್ಮನ್ನು ಈ ಯೋಜನೆಗೆ ದಾಖಲಿಸುತ್ತಾರೆ. ನೀವು https://pm-mvy-cas.nic.in/public/beneficiaryuserac-count/login ಲಿಂಕ್ ಮೂಲಕ ಯೋಜನೆಯ ವೆಬ್ ಸೈಟ್‌ಗೆ ನೇರವಾಗಿ ಹೋಗಬಹುದು. ಅಲ್ಲಿ ಅದನ್ನು ಫಲಾನುಭವಿ ಲಾಗಿನ್ ಎ೦ದು ಕರೆಯಲಾಗುತ್ತದೆ. ನೀವು ನೋಂದಾಯಿಸಿಕೊಂಡು ಲಾಗಿನ್ ಆಗಬೇಕು.