Railway Recruitment | ಕೇಂದ್ರ ಸರ್ಕಾರಿ ಉದ್ಯೋಗ ಮಾಡಲು ಬಯಸುವವರಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸುದ್ದಿ ನೀಡಿದೆ. ದೇಶಾದ್ಯಂತ 18 ರೈಲ್ವೆ ವಲಯಗಳಲ್ಲಿ 6180 ತಂತ್ರಜ್ಞ ಹುದ್ದೆಗಳಿಗೆ ಭಾರತೀಯ ರೈಲ್ವೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 51 ಇಲಾಖೆಗಳಲ್ಲಿ ಗ್ರೇಡ್ 1 & ಗ್ರೇಡ್ 3 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಅಧಿಸೂಚನೆಯ ಬಗ್ಗೆ ಈಗ ಇನ್ನಷ್ಟು ತಿಳಿದುಕೊಳ್ಳೋಣ.
ಜುಲೈ 28, 2025 ರವರೆಗೆ ಅವಕಾಶ
ಈ ನೇಮಕಾತಿ ಪ್ರಕ್ರಿಯೆಯಡಿ, ಆರ್ಆರ್ಬಿ 6,180 ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 28-06-2025. ಅಭ್ಯರ್ಥಿಗಳು ಜುಲೈ 28, 2025 ರವರೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ವಲಯವಾರು ವಿವರಗಳು
- ಪೂರ್ವ ರೈಲ್ವೆ(ER): 1,119
- ಪಶ್ಚಿಮ ರೈಲ್ವೆ(WR): 849
- ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF): 404
- ಉತ್ತರ ರೈಲ್ವೆ (NR): 478
- ಉತ್ತರ ಮಧ್ಯ ರೈಲ್ವೆ (NCR): 241
- ಮಧ್ಯ ರೈಲ್ವೆ (CR): 305
ವಯಸ್ಸು
ಗ್ರೇಡ್ I: ಕನಿಷ್ಠ 18 – ಗರಿಷ್ಠ 36 ವರ್ಷ. ಗ್ರೇಡ್ III: ಕನಿಷ್ಠ 18- ಗರಿಷ್ಠ 33 ವರ್ಷ. SC/ST ಅವರಿಗೆ 5 ವರ್ಷ. OBC ಗಳಿಗೆ 3 ವರ್ಷ. PWD ಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯಿದೆ.
ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲೆ ಪರಿಶೀಲನೆ & ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. CBT ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳಿವೆ (ಪ್ರತಿ ತಪ್ಪು ಉತ್ತರಕ್ಕೆ -0.33). ಆಯ್ಕೆಯಾದ ಅಭ್ಯರ್ಥಿಗಳ ವೇತನವು ಗ್ರೇಡ್ I ಉದ್ಯೋಗಿಗಳಿಗೆ 29,200 ರಿಂದ 92,300 ರೂ. ಮತ್ತು ಗ್ರೇಡ್ III ಉದ್ಯೋಗಿಗಳಿಗೆ 19,900 ರಿಂದ 63,200 ರೂ ಆಗಿದೆ…
ಅರ್ಜಿ ಸಲ್ಲಿಸುವ ವಿಧಾನ
- ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ ಸೈಟ್ ಗೆ https://indianrailways.gov.in ಭೇಟಿ ನೀಡಬೇಕು.
- ವೈಯಕ್ತಿಕ ಮತ್ತು ಶೈಕ್ಷಣಿಕ ಅರ್ಹತೆಗಳ ವಿವರಗಳನ್ನು ನಮೂದಿಸಬೇಕು.
- ಅರ್ಹತೆಗಳಿಗೆ ಸಂಬ೦ಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
- ಸಾಮಾನ್ಯ, OBC, EWS ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹500. – SC, ST, ಮಹಿಳೆಯರು & ದಿವ್ಯಾಂಗ ಅಭ್ಯರ್ಥಿಗಳಿಗೆ ₹250.




