BPL card : ರಾಜ್ಯದಲ್ಲಿ ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ವಿಷಯ ಅಂದರೆ BPL ಕಾರ್ಡ್. ಆದಾಯ ತೆರಿಗೆ ಪಾವತಿದಾರರು, ಜಮೀನುದಾರರು, ಸರ್ಕಾರಿ ನೌಕರರು ಅಂತ ಲಕ್ಷ ಲಕ್ಷ ಜನರ BPL ಕಾರ್ಡ್‌ಗಳನ್ನು ಸರ್ಕಾರ ರದ್ದು ಮಾಡಿತ್ತು.
ಆದರೆ ಈ ವೇಳೆ ಕೆಲ ಅರ್ಹ ಫಲಾನುಭವಿಗಳೂ ಕಾರ್ಡ್ ಕಳೆದುಕೊಂಡಿದ್ದರು. BJP ಸಹ ಹೋರಾಟಕ್ಕೆ ಇಳಿದಿತ್ತು. ಹೀಗಾಗಿ ಸರ್ಕಾರ BPL ಕಾರ್ಡ್‌ನಿಂದ ವಂಚಿತರಾಗಿದ್ದವರಿಗೆ ಮರು ಪರಿಶೀಲನೆಯ ಭರವಸೆ ನೀಡಿತ್ತು. ಇದರಂತೆ ಇಂದಿನಿಂದ BPL ಕಾರ್ಡ್‌ಗಳ ಮರುಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: BPL card | BPL ಕಾರ್ಡ್ ಫಲಾನುಭವಿಗಳಿಗೆ ರಿಲೀಫ್ : ಸರ್ಕಾರದಿಂದ ಮಹತ್ವದ ಆದೇಶ
BPL card : BPL ಕಾರ್ಡ್ ಮರಳಿ ಪಡೆಯುವುದು ಹೇಗೆ?
- ತಾಲೂಕು ಕಚೇರಿಗಳಲ್ಲೇ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ತಿದ್ದುಪಡಿ
- ರೇಷನ್ ಕಾರ್ಡ್, ಆಧಾರ್ ಕಾರ್ಡ್ ಆದಾಯದ ಬಗ್ಗೆ ಮಾಹಿತಿ ನೀಡಬೇಕು
- ಒಂದು ವೇಳೆ ಲೋನ್ ತೆಗೆದುಕೊಂಡಿದ್ದರೆ ರಶೀದಿ, ಲೋನ್ ಸಂಬಂಧ ಆದಾಯ ತೆರಿಗೆ ಪಾವತಿಸಿದ್ದರೆ ಆದಾಯ ಸಂಬಂಧ ದಾಖಲೆ ಸಲ್ಲಿಸಬೇಕು.
- ಈ ರೀತಿಯ ದಾಖಲೆ ಸಲ್ಲಿಸಿ ಕಾರ್ಡ್ ಸರಿಪಡಿಸಿಕೊಳ್ಳಲು ಅವಕಾಶವಿದೆ. ಇಂದು ಮಧ್ಯಾಹ್ನ 3 ಗಂಟೆಯ ಬಳಿಕ ತಿದ್ದುಪಡಿ ಕೆಲಸ ಆರಂಭವಾಗಲಿದೆ.
ಇದನ್ನೂ ಓದಿ: Gruhalakshmi Yojana | ತೆರಿಗೆ ಕಟ್ಟುವವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸಿಗಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment