gruhalakshmi: ಅರ್ಜಿ ಹಾಕಿದರೂ ಗೃಹಲಕ್ಷ್ಮೀ ಯೋಜನೆಯ ಹಣ ನಿಮಗಿನ್ನೂ ಬಂದಿಲ್ವಾ? ಯೋಜನೆಗೆ ಚಾಲನೆ ಕೊಟ್ಟು 2 ತಿಂಗಳಾಗುತ್ತಾ ಬಂತು. 92 ಲಕ್ಷ ಅರ್ಹರಿಗೆಯೋಜನೆ ಮೂಲಕ ಹಣ ತಲುಪಿದೆ. ಇನ್ನೂ 18 ಲಕ್ಷದಷ್ಟು ಮನೆಯೊಡತಿಯರಿಗೆ ಇನ್ನೂ ಹಣ ಬಂದಿಲ್ಲ. ಇದಕ್ಕೆ ಕಾರಣ ಅರ್ಜಿ ಸಲ್ಲಿಕೆ ಮಾಡುವುದಾಗ ನೀಡಿರುವ ಮಾಹಿತಿ.
ಇದನ್ನೂ ಓದಿ: BIGG BOSS Season 10ಕ್ಕೆ ಕೌಂಟ್‌ಡೌನ್; ಬಿಗ್‌ಬಾಸ್ ಮನೆಗೆ ʻಕಾಂತಾರʼ ನಟ? ಯಾರೆಲ್ಲಾ ಎಂಟ್ರಿ?
ಹೌದು, ಗೃಹ ಲಕ್ಷ್ಮೀ ಯೋಜನೆಯಡಿ ಈವರೆಗೆ 92 ಲಕ್ಷ ಕುಟುಂಬಗಳ ಯಜಮಾನಿಯರ ಖಾತೆಗಳಿಗೆ ₹2 ಸಾವಿರ ಹಣ ಹಾಕಲಾಗಿದೆ. ಗೃಹಲಕ್ಷ್ಮಿ ಯೋಜನೆಯ 18 ಲಕ್ಷದಷ್ಟು ಮನೆಯೊಡತಿಯರಿಗೆ ಅಗಸ್ಟ್ ತಿಂಗಳ ಹಣ ಸಂದಾಯ ಆಗಿಲ್ಲ. ಈ ಹಣ ಈ ತಿಂಗಳು ಕೂಡ ಆಗದೇ ಇರಬಹುದು.

ಇದಕ್ಕೆ ಪ್ರಮುಖ ಕಾರಣ, ನೀವು ಅರ್ಜಿ ಸಲ್ಲಿಕೆ ಮಾಡಿದ್ದಾಗ ನೀಡಿರುವ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿ ಹಾಗೂ ಆಧಾರ್ ಕಾರ್ಡ್ನಲ್ಲಿರುವ ಮಾಹಿತಿ. ಈ ಮೂರು ಕೂಡ ಒಂದೇ ಆಗಿರಬೇಕು. ಅಂದರೇ ನಿಮ್ಮ ಹೆಸರು, ಮನೆ ವಿಳಾಸ, ಇದ್ದರೆ ಅದು ಕೂಡ ಸರಿಯಾಗಿ ಇರಬೇಕಾಗಿದ್ದು, ಈ ಸಮಸ್ಯೆ ಇರುವ ಕಾರಣದಿಂದಲೇ ಇನ್ನೂ 18 ಲಕ್ಷದಷ್ಟು ಮನೆಯೊಡತಿಯರಿಗೆ ಹಣ ವರ್ಗಾವಣೆ ಆಗಿಲ್ಲ ಅಂತ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಈ ಕಾರ್ಡ್‌ನಿಂದ ಸಿಗಲಿದೆ 5 ಲಕ್ಷದವರೆಗೆ ಉಚಿತ ಚಿಕತ್ಸೆ; ಆಯುಷ್ಮಾನ್ ಕಾರ್ಡ್ ಪಡೆಯಲು ಹೀಗೆ ಅರ್ಜಿ ಹಾಕಿ
ಇನ್ನು, ಕೆಲ ಖಾತೆದಾರರು ದಾಖಲೆ ತಿದ್ದುಪಡಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಕೆಲವರಿಗೆ ದುಡ್ಡು ಜಮೆಯಾಗಿಲ್ಲ. ಕಳೆದ ಆ.15ರೊಳಗೆ ಯಾರು ಅರ್ಜಿ ಅಪ್ಲೋಡ್ ಮಾಡಿದ್ದರೋ ಅವರ ಖಾತೆಗೆ ದುಡ್ಡು ಬಂದಿದ್ದು, ಆಗಸ್ಟ್ 15 ನಂತರ ಮಾಡಿದವರಿಗೆ ಸದ್ಯದಲ್ಲೇ ಹಣ ಜಮೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
gruhalakshmi: ಗೃಹಲಕ್ಷ್ಮಿ 2ನೇ ಕಂತು ಯಾವಾಗ?
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತು ಬಿಡುಗಡೆಯಾಗಿದ್ದರು, ನೋಂದಣಿ ಮಾಡಿಕೊಂಡ ಹಲವು ಮಹಿಳೆಯರಿಗೆ ಅದನ್ನು ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಸರ್ಕಾರ ವಿವಿಧ ಕಾರಣಗಳನ್ನು ನೀಡಿದರೂ, 2ನೇ ಕಂತು ಯಾವಾಗ ಎಂದು ಮೊಲದ ಕಂತಿನ ಹಣ ಪಡೆದಿದ್ದ ಫಲಾನುಭವಿಗಳು ಕೇಳುತ್ತಿದ್ದಾರೆ. ಸರ್ಕಾರದ ಘೋಷಿಸಿದ್ದಂತೆ ಪ್ರತಿ ತಿಂಗಳು 27-30ರ ಒಳಗೆ ಗೃಹಲಕ್ಷ್ಮಿಯರ ಖಾತೆಗೆ ಹಣ ಜಮೆಯಾಗಬೇಕಿದ್ದು, 2ನೇ ಕಂತಿನ ಬಗ್ಗೆ ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ. ಸಮಾಜ ಕಲ್ಯಾಣ ಇಲಾಖೆ ಅಧಿಕೃತ ಮಾಹಿಯನ್ನೂ ನೀಡಿಲ್ಲ.
ಇದನ್ನೂ ಓದಿ: ಖ್ಯಾತ ನಟಿ ಶ್ರೀದೇವಿಯದ್ದು ಸಹಜ ಸಾವಲ್ಲ, ಪತಿಯ ಅಚ್ಚರಿಯ ಹೇಳಿಕೆ
ಅರ್ಜಿ ಸಲ್ಲಿಸದಿದ್ರೆ, ಹೀಗೆ ಮಾಡಿ
ಇನ್ನು, ನೀವು ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಬೇಕಿದ್ದಲ್ಲಿ ಈಗಲೂ ಅರ್ಜಿ ಸಲ್ಲಿಸಬಹುದು. ಹೌದು ಈ 8147500500 ಸಂಖ್ಯೆಗೆ ವಾಟ್ಸಪ್ ಚಾಟ್‌ಬಾಟ್ ಮೂಲಕ ಸುಲಭವಾಗಿ ಅಗತ್ಯ ದಾಖಲೆಗಳ ಒದಗಿಸಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |