BIGG BOSS Season 10: ಕನ್ನಡದ ಯಶಸ್ವಿ ರಿಯಾಲಿಟಿ ಶೋ ಬಿಗ್‌ಬಾಸ್ ತನ್ನ 10ನೇ ಆವೃತ್ತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು,ಈಗಾಗಲೇ ಇದರ ಪ್ರೋಮೋಗಳು ವೈರಲ್ ಆಗಿದ್ದು, ಈ ಸೀಸನ್ ಹಿಂದಿನ ಸೀಸನ್‌ಗಳಿಗಿಂತ ವಿಭಿನ್ನವಾಗಿರಲಿದೆ ಎಂದು ಹೇಳಲಾಗಿದ್ದು, ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಈ ಕಾರ್ಡ್‌ನಿಂದ ಸಿಗಲಿದೆ 5 ಲಕ್ಷದವರೆಗೆ ಉಚಿತ ಚಿಕತ್ಸೆ; ಆಯುಷ್ಮಾನ್ ಕಾರ್ಡ್ ಪಡೆಯಲು ಹೀಗೆ ಅರ್ಜಿ ಹಾಕಿ
ಕಿಚ್ಚ ಸುದೀಪ್ ವೀಕೆಂಡ್ ಪಂಚಾಯಿತಿ ನಡೆಸಿಕೊಡಲಿದ್ದು, ಅಕ್ಟೋಬರ್ 8 ರಂದು ಹೊಸ ಸೀಸನ್ ಆರಂಭವಾಗಲಿದೆ. ಈ ಸೀಸನ್‌ನಲ್ಲಿ ಯಾರೆಲ್ಲಾ ಬಿಗ್‌ಬಾಸ್ ಮನೆಗೆ ಎಂಟ್ರಿಕೊಡುತ್ತಾರೆ ಅನ್ನುವ ಕುತೂಹಲವಿದ್ದರೂ, ಕೆಲ ಹೆಸರುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿವೆ.

BIGG BOSS Season 10: ಬಿಗ್‌ಬಾಸ್ ಮನೆಗೆ ʻಕಾಂತಾರʼ ನಟ?
ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್-10 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು,ಕಂಟೆಸ್ಟಂಟ್‌ಗಳ ಬಗ್ಗೆ ಚರ್ಚೆಯಾಗುತ್ತಿದ್ದು, ಕಾಂತಾರ ನಟ ಪ್ರಕಾಶ್ ತುಮಿನಾಡು ಬಿಗ್‌ಬಾಸ್ ಮನೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಪ್ರಕಾಶ್, ವಾಹಿನಿ ಕಡೆಯಿಂದಾಗಲಿ ಅಧಿಕೃತ ಹೇಳಿಕೆಗಳು ಬಂದಿಲ್ಲ. ಪ್ರಕಾಶ್ ಕಾಂತಾರದಲ್ಲಿ ರಾಂಪ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗಿಸಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ ರಾಮಣ್ಣ ರೈ ಪಾತ್ರ ನಿಭಾಯಿಸಿ ಮನೆ ಮಾತಾಗಿದ್ದರು.
ಇದನ್ನು ಓದಿ: ಖ್ಯಾತ ನಟಿ ಶ್ರೀದೇವಿಯದ್ದು ಸಹಜ ಸಾವಲ್ಲ, ಪತಿಯ ಅಚ್ಚರಿಯ ಹೇಳಿಕೆ
BIGG BOSS Season 10: ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ?
ಇನ್ನು, ಬಿಗ್‌ಬಾಸ್ ಸೀಸನ್ 10ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ, ಗಟ್ಟಿಮೇಳ ಧಾರಾವಾಹಿ ನಟಿ ಸ್ವಾತಿ, ನಟ ಶಿವರಾಜ್ ಕೆ.ಆರ್ ಪೇಟೆ, ನಟಿ ರೂಪಾ ರಾಯಪ್ಪ, ನಟ ಸುನೀಲ್ ರಾವ್, ಕ್ರಿಕೆಟಿಗ ವಿನಯ್ ಕುಮಾರ್, ಬುಲೆಟ್ ಪ್ರಕಾಶ್ ಮಗ ರಕ್ಷಕ್, ರ‍್ಯಾಪರ್ ಇಶಾನಿ, ಮಿಮಿಕ್ರಿ ಆರ್ಟಿಸ್ಟ್ ಗೋಪಿ, ರಾಜೇಶ್ ಧ್ರುವ, ನಮ್ರತಾ ಗೌಡ ಬಿಗ್‌ಬಾಸ್ ಮನೆಗೆ ಎಂಟ್ರಿಕೊಡಲಿದ್ದಾರೆ ಎನ್ನಲಾಗಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |