UPI transaction limit : ಯುಪಿಐ ಬಳಕೆದಾರರಿಗೆ ಖುಷಿ ಸುದ್ದಿ. ಪಿನ್ ಕೋಡ್ ಇಲ್ಲದೇ ಹಣ ಪಾವತಿಸಬಲ್ಲಂತಹ ಯುಪಿಐ ಲೈಟ್ ವ್ಯಾಲಟ್ನ ಹಣದ ಮಿತಿಯನ್ನು ₹10,000ಕ್ಕೆ ಹೆಚ್ಚಿಸಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಬುಧವಾರ ಪ್ರಕಟಿಸಿದ್ದಾರೆ.
ಹೌದು, ಆರ್‌ಬಿಐ ಶಕ್ತಿಕಾಂತ್ ದಾಸ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, UPI 123PAY ನಲ್ಲಿ ಪ್ರತಿ ವಹಿವಾಟಿನ ಮಿತಿಯನ್ನು ₹5,000 ದಿಂದ ₹10,000ಕ್ಕೆ ಹೆಚ್ಚಿಸಲಾಗುವುದು, ಹಾಗೂ ಯುಪಿಐ ಲೈಟ್ ವಾಲೆಟ್ ಮಿತಿಯನ್ನು ₹2,000 ದಿಂದ ₹5,000ಕ್ಕೆ, ಪ್ರತಿ ವಹಿವಾಟಿನ ಮಿತಿಯನ್ನ ₹500 ರಿಂದ ₹1,000ಕ್ಕೆ ಹೆಚ್ಚಿಸಲಾಗುವುದು ಎಂದು ಬುಧವಾರ ಪ್ರಕಟಿಸಿದರು.
ಇದನ್ನೂ ಓದಿ: ಸತತ 10ನೇ ಬಾರಿಗೆ ರೆಪೊ ದರ ಯಥಾಸ್ಥಿತಿಯಲ್ಲಿ ಇರಿಸಿದ ಆರ್‌ಬಿಐ
ಇನ್ನು, ಯುಪಿಐ ಲೈಟ್ ಮೂಲಕ ಪಿನ್ ನಮೂದಿಸದೆ ವಹಿವಾಟು ಮಾಡಬಹುದು. UPI 123PAY ಸೇವೆ ಮೂಲಕ ಇಂಟರ್ನೆಟ್ ಸಂಪರ್ಕ, ಸ್ಮಾರ್ಟ್‌ಫೋನ್ ಇಲ್ಲದೆಯೇ ಡಿಜಿಟಲ್ ಪಾವತಿ ಮಾಡಬಹುದು.