Ration Card EKYC : ಆಧಾರ್ ದೃಢೀಕರಣ(ಇ-ಕೆವೈಸಿ) ಮಾಡಿಸದೇ ಇರುವ ಪಡಿತರ ಚೀಟಿದಾರರು ನ.30 ರೊಳಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ತಿಳಿಸಿದೆ.
ಹೌದು, ಪಡಿತರ ಚೀಟಿದಾರರು ತಮ್ಮ ಗುರುತು ನೋಂದಣಿ ಅಥವಾ ಮರುನೋಂದಣಿ ಮಾಡಿಸದೇ ಇರುವ ಎಲ್ಲಾ ಸದಸ್ಯರು ನವೆಂಬರ್ 30 ರೊಳಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಬೆರಳಚ್ಚು ನೀಡಿ ಭಯೋ ಸಂಗ್ರಹಣೆ (ಇ-ಕೆವೈಸಿ) ಸಂಗ್ರಹಣೆ ಕಾರ್ಯ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
ಇದನ್ನೂ ಓದಿ: New Ration Card : ಹೊಸ ಪಡಿತರ ಚೀಟಿ ಪಡೆಯಲು ಮಾನದಂಡಗಳೇನು? ಯಾವ ದಾಖಲೆ ಕಡ್ಡಾಯ
ಇನ್ನು, ಆಧಾರ್ ದೃಢೀಕರಣ(ಇ-ಕೆವೈಸಿ) ಮಾಡಿಸದೇ ಇರುವ ಫಲಾನುಭವಿಗಳಿಗೆ ಡಿಸೆಂಬರ್ ಮಾಹೆಯಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಲಾಗಿದೆ. ಇದಕ್ಕೆ ಯಾವುದೇ ಹಣ ನೀಡುವಂತಿಲ್ಲ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment