ದಾವಣಗೆರೆ: ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ವಿಚಾರ ಈ ಪ್ರಕರಣದಲ್ಲಿ ಸರಿ ತಪ್ಪು ಬಗ್ಗೆ ಕೋರ್ಟ್ ತೀರ್ಮಾನಿಸಲಿದೆ. ಆದರೆ ಅಷ್ಟರೊಳಗೆ ಅವರ ತೇಜೋವಧೆ ನಡೆದುಹೋಗುತ್ತದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಹರಿಹರ ತಾಲೂಕಿನ ಹಗನವಾಡಿಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಈ ಕುರಿತು ಸಂತ್ರಸ್ತೆ ಈವರೆಗೆ ದೂರು ನೀಡಿಲ್ಲ. ಇಂತಹ ಪ್ರಕರಣದಲ್ಲಿ ಯಾರು ಬೇಕಾದರೂ ದೂರು ನೀಡಬಹುದು. ಹಾಗಾಗಿ 3ನೇ ವ್ಯಕ್ತಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದರೂ ಒಂದು ಮಾತು, ಪ್ರತಿಕ್ರಿಯಿಸದೆ ಇದ್ದರೂ ಒಂದು ಮಾತು ಬರುತ್ತದೆ. ಇನ್ನು ನನ್ನದು ಯಾವುದೂ ಇಂತಹ ಸಿಡಿ ಇಲ್ಲ ಎಂದು ಸಚಿವ ಮಾಧುಸ್ವಾಮಿ ಅವರು ಹೇಳಿದರು.
ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಕೋರ್ಟ್ ತೀರ್ಮಾನಿಸಲಿದೆ. ಆದರೆ ಅಷ್ಟರೊಳಗೆ ಅವರ ತೇಜೋವಧೆ ನಡೆದುಹೋಗುತ್ತದೆ. ಅದಕ್ಕಾಗಿಯೇ ಇಂತಹ ತೇಜೋವಧೆ ತಪ್ಪಿಸಲು ಕೆಲ ಸಚಿವರು ಕೋರ್ಟ್ ಮೊರೆ ಹೋಗಿದ್ದು, ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಚಿವ ಮಾಧುಸ್ವಾಮಿ ಅವರು ಹೇಳಿದರು.