ಬೆಂಗಳೂರು, ಮಾರ್ಚ್ 4: ಪ್ರಾಕ್ರಮಿಕಾ ವೃತ್ತಿಪರ ಸಂಸ್ಥೆ (ಪಿವಿಐ), ತನ್ನ ಸಹ ಕಂಪನಿಗಳಾದ ಎಂಪ್ಲುಸಿವ್ ತರಬೇತಿ ಕೇಂದ್ರ ಮತ್ತು ಮುದಿತಾ ಕ್ರಿಯೇಟಿವ್ ಸ್ಕೂಲ್ ಸಹಯೋಗದಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ತನ್ನ ಎರಡನೇ ಘಟಿಕೋತ್ಸವ ಸಮಾರಂಭವನ್ನು ಹೆಮ್ಮೆಯಿಂದ ಆಯೋಜಿಸಿತ್ತು. ಈ ಭವ್ಯ ಕಾರ್ಯಕ್ರಮವು ವಿಶಿಷ್ಟ ವ್ಯಕ್ತಿಗಳಿಗೆ ಅಂತರ್ಗತ ಶಿಕ್ಷಣ ಮತ್ತು ವೃತ್ತಿಪರ ಸಬಲೀಕರಣದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಎನಿಸಿತು. ವೃತ್ತಿಪರರು (ಪಿವಿಐ ತನ್ನ ವಿದ್ಯಾರ್ಥಿಗಳನ್ನು ಹೀಗೆ ಸಂಬೋಧಿಸುತ್ತಾರೆ) ಘಟಿಕೋತ್ಸವದ ನಿಲುವಂಗಿಗಳನ್ನು ಧರಿಸಿ ಸಮಾರಂಭದ ಕೇಂದ್ರ ಬಿಂದುಗಳಾಗಿ ಗಣ್ಯ ವ್ಯಕ್ತಿಗಳಿಂದ ಪೂರ್ಣಗೊಳಿಸುವಿಕೆ ಪ್ರಮಾಣಪತ್ರಗಳು, ಶೀಲ್ಡ್, ಟ್ರೋಫಿಗಳು ಮತ್ತು ಪದಕಗಳನ್ನು ಪಡೆದರು.
ಈ ಕಾರ್ಯಕ್ರಮವದಲ್ಲಿ ಮುಖ್ಯ ಅತಿಥಿಗಳಾಗಿ ಕೇರಳದ ಡಿಜಿಪಿ, ಐಪಿಎಸ್ ಅಧಿಕಾರಿ ಡಾ. ಸಂಜೀಬ್ ಪಟಜೋಶಿ ಮತ್ತು ಗೌರವ ಅತಿಥಿಗಳಾಗಿ ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ವುಡೇ ಪಿ. ಕೃಷ್ಣ ಭಾಗಹಿಸಿದ್ದರು. ಅವರ ಸ್ಪೂರ್ತಿದಾಯಕ ಮಾತುಗಳು ಇಂದಿನ ಜಗತ್ತಿನಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಸೇರ್ಪಡೆಯ ಮಹತ್ವವನ್ನು ಒತ್ತಿ ಹೇಳಿದವು.
ಪಿವಿಐನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಡಾ. ಗಾಯತ್ರಿ ನರಸಿಂಹನ್ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, “ಈ ಘಟಿಕೋತ್ಸವವು ಕೇವಲ ಸಮಾರಂಭ ಮಾತ್ರವಾಗಿರದೇ ಶಿಕ್ಷಣ, ಸೇರ್ಪಡೆ ಮತ್ತು ಪರಿಶ್ರಮದ ಶಕ್ತಿಗೆ ಸಾಕ್ಷಿಯಾಗಿದೆ. ನಮ್ಮ ಕಲಿಕಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಘಟಿಕೋತ್ಸವ ಸಮಾರಂಭವನ್ನು ನಡೆಸುವ ಮೂಲಕ, ನಾವು ನಮ್ಮ ವೃತ್ತಿಪರರ ದೀರ್ಘಾವಧಿಯ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತೇವೆ ಮತ್ತು ಗುರುತಿಸುತ್ತೇವೆ, ಆದರೆ ನಾವು ಜಗತ್ತಿಗೆ, ವಿಶೇಷವಾಗಿ ಸಂಭಾವ್ಯ ಉದ್ಯೋಗದಾತರಿಗೆ, ನಮ್ಮ ವೃತ್ತಿಪರರು ಅಗತ್ಯ ಕೌಶಲ್ಯಗಳನ್ನು ಪಡೆದುಕೊಂಡಿದ್ದಾರೆ ಮತ್ತು ಉದ್ಯೋಗಕ್ಕೆ ಸಿದ್ಧರಾಗಿದ್ದಾರೆ ಎಂದು ಪ್ರದರ್ಶಿಸುತ್ತೇವೆ. ನಮ್ಮ ಮಂಡಳಿಯ ಸದಸ್ಯರು, ಪಾಲುದಾರರು ಮತ್ತು ಮುಖ್ಯವಾಗಿ, ಈ ಧ್ಯೇಯವನ್ನು ನಂಬುವ ನಮ್ಮ ವೃತ್ತಿಪರರು (ನಾವು ನಮ್ಮ ವಿದ್ಯಾರ್ಥಿಗಳನ್ನು ಹಾಗೆ ಕರೆಯುತ್ತೇವೆ) ಮತ್ತು ಅವರ ಕುಟುಂಬಗಳ ಅಚಲ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ” ಎಂದು ಹೇಳಿದರು.
ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಉದಾರ ಮತ್ತು ನಿರಂತರ ಸಹಯೋಗಕ್ಕಾಗಿ ನಮ್ಮ ಶಿಕ್ಷಣ ಪಾಲುದಾರರಾದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿಗೆ ಪಿವಿಐ ತನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ವಿಶಿಷ್ಟ ಸಾಮಥ್ರ್ಯದ ವ್ಯಕ್ತಿಗಳಿಗೆ ಉಚಿತ, ಕೌಶಲ್ಯ ಆಧಾರಿತ ತರಬೇತಿಯನ್ನು ಒದಗಿಸುವ ಸಂಸ್ಥೆಯ ಧ್ಯೇಯವನ್ನು ಸಕ್ರಿಯಗೊಳಿಸುತ್ತಿರುವ ನಮ್ಮ ಪ್ರಾಯೋಜಕರು ಮತ್ತು ಬೆಂಬಲಿಗರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.