Post Office Savings Scheme | ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಹೇಗೆ ಪ್ರಾರಂಭವಾಯಿತು? ಹೇಗೆ ಕಾರ್ಯನಿರ್ವಹಿಸುತ್ತದೆ?

Post Office Savings Scheme : ಅಂಚೆ ಕಚೇರಿ ಭಾರತದ ಅತ್ಯಂತ ಹಳೆಯ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಅಕ್ಟೋಬರ್ 1854 ರಲ್ಲಿ ಬ್ರಿಟಿಷ್ ಯುಗದಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ಅಂಚೆ ತಲುಪಿಸುವತ್ತ ಮಾತ್ರ ಕೇಂದ್ರೀಕರಿಸಿತು ನಂತರ…

Post Office Savings Scheme

Post Office Savings Scheme : ಅಂಚೆ ಕಚೇರಿ ಭಾರತದ ಅತ್ಯಂತ ಹಳೆಯ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಅಕ್ಟೋಬರ್ 1854 ರಲ್ಲಿ ಬ್ರಿಟಿಷ್ ಯುಗದಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ಅಂಚೆ ತಲುಪಿಸುವತ್ತ ಮಾತ್ರ ಕೇಂದ್ರೀಕರಿಸಿತು ನಂತರ ಇತರ ಹಣಕಾಸು ಸೇವೆಗಳ ಶ್ರೇಣಿಯನ್ನು ಒದಗಿಸಲು ಪ್ರಾರಂಭಿಸಿತು. 

ಅಂದರೆ ಬ್ಯಾಂಕಿಂಗ್, ವಿಮೆ ಮತ್ತು ಹೂಡಿಕೆಗಳು ಇತ್ಯಾದಿ. ಈ ಯೋಜನೆಯನ್ನು ಸರ್ಕಾರ ಬೆಂಬಲಿಸುತ್ತದೆ. ಇನ್ನು, ಕೆಲವು ಅಂಚೆ ಕಚೇರಿ ಉಳಿತಾಯ ಯೋಜನೆಗಳು (Post Office Savings Scheme) ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಪ್ರಯೋಜನಗಳನ್ನು (Tax saving benefit) ಸಹ ನೀಡುತ್ತವೆ..

ಇದನ್ನೂ ಓದಿ: ಪ್ರಧಾನ ಮಂತ್ರಿ ಕುಸುಮ್ ಯೋಜನೆ | ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಪ್ರಯೋಜನಗಳು, ಅರ್ಜಿ ಸಲ್ಲಿಕೆ

Vijayaprabha Mobile App free

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?

Post Office Savings Scheme
Post Office Savings Scheme

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಇದು ಹಣವನ್ನು ಠೇವಣಿ ಮಾಡಲು ಮತ್ತು ವಹಿವಾಟು ನಡೆಸಲು ಜನಪ್ರಿಯ ಉಳಿತಾಯ ಯೋಜನೆಯಾಗಿದೆ.

ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಲು ಮತ್ತು ಪ್ರತಿ ತಿಂಗಳು ಸ್ಥಿರ ಬಡ್ಡಿಯನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ವೈಯಕ್ತಿಕವಾಗಿ 9 ಲಕ್ಷ ರೂ.ಗಳವರೆಗೆ ಅಥವಾ ಜಂಟಿಯಾಗಿ 15 ಲಕ್ಷ ರೂ.ಗಳವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ 1000 ರೂ., ಹೆಚ್ಚುವರಿ ಠೇವಣಿ 1000 ರೂ. ಮತ್ತು ಹೂಡಿಕೆಯ ಅವಧಿ 5 ವರ್ಷಗಳು.

ಇದನ್ನೂ ಓದಿ: Equity Mutual Fund | ಈಕ್ವಿಟಿ ಫಂಡ್‌ ಎಂದರೇನು? ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಏಕೆ ಹೂಡಿಕೆ ಮಾಡಬೇಕು? ಯೋಜನಗಳೇನು

Post Office Savings Scheme ತೆರೆಯಲು ಅಗತ್ಯವಿರುವ ದಾಖಲೆಗಳು

ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ತೆರೆಯಲು ಈ ದಾಖಲೆಗಳು ಕಡ್ಡಾಯವಾಗಿ ಇರಬೇಕು. ಖಾತೆ ತೆರೆಯುವ ನಮೂನೆ, KYC ಫಾರ್ಮ್ (ಹೊಸ ಗ್ರಾಹಕರಿಗಾಗಿ, KYC ವಿವರಗಳಲ್ಲಿ ಮಾರ್ಪಾಡು), ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಇರಬೇಕು. ಒಂದು ವೇಳೆ ಆಧಾರ್ ಲಭ್ಯವಿಲ್ಲದಿದ್ದರೆ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ರಾಜ್ಯ ಸರ್ಕಾರಿ ಅಧಿಕಾರಿ ಸಹಿ ಮಾಡಿದ ಎಂಎನ್ಆರ್ಇಜಿಎ ಜಾಬ್ ಕಾರ್ಡ್, ಅಪ್ರಾಪ್ತ ಖಾತೆಯ ಸಂದರ್ಭದಲ್ಲಿ ಹುಟ್ಟಿದ ದಿನಾಂಕ ಅಥವಾ ಜನನ ಪ್ರಮಾಣ ಪತ್ರದ ಪುರಾವೆ ಇರಬೇಕು.

ಇದನ್ನೂ ಓದಿ: ಯುನಿಟ್ ಲಿಂಕ್ಡ್ ವಿಮಾ ಯೋಜನೆ ವಿಧಗಳು, ತೆರಿಗೆ ಪ್ರಯೋಜನಗಳು

ಮೊಬೈಲ್ ಆಪ್ ಮೂಲಕ Post Office Savings Scheme ಖಾತೆಯನ್ನು ಈ ರೀತಿಯಾಗಿ ತೆರೆಯಬಹುದು

ಮೊಬೈಲ್ ಆಪ್ ಮೂಲಕ ಪೋಸ್ಟ್ ಆಫೀಸ್ ಯೋಜನೆಗಳ ಖಾತೆಯನ್ನು ತೆರೆಯಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ‘ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್’ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಲಾಗ್ ಇನ್ ಆಗಿ. ಯಶಸ್ವಿಯಾಗಿ ಲಾಗಿನ್ ಆದ ನಂತರ, ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ತೆರೆಯಲು ಹೋಮ್ ಸ್ಕ್ರೀನ್ ನಲ್ಲಿರುವ ‘ವಿನಂತಿಗಳು’ ಟ್ಯಾಬ್ ಅನ್ನು ಆಯ್ಕೆ ಮಾಡಿ. ಠೇವಣಿ ಮೊತ್ತ, ಅವಧಿ, ನೀವು ಹಣವನ್ನು ಠೇವಣಿ ಮಾಡಲು ಬಯಸುವ ಖಾತೆ, ನಾಮಿನಿ ಮತ್ತು ಇತರ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ.

ಇದನ್ನೂ ಓದಿ: ಮಹಿಳೆಯರಿಗಾಗಿ ಸರ್ಕಾರದ ತಾಯಿ ಭಾಗ್ಯ ಯೋಜನೆ; ಸೌಲಭ್ಯಗಳು, ಅರ್ಜಿ ಸಲ್ಲಿಕೆ

ಕೇವಲ 1500 ರೂ. ಹೂಡಿಕೆ ಮಾಡಿ 35 ಲಕ್ಷ ರೂ. ಪಡೆಯುವುದು ಹೇಗೆ?

ಕಷ್ಟಪಟ್ಟು ದುಡಿದ ಹಣ ಉಳಿತಾಯವಾಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಸರ್ಕಾರ ಬೆಂಬಲಿಸುವ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯು ವಿವಿಧ ಪ್ರಯೋಜನಗಳು ಮತ್ತು ಬಡ್ಡಿದರಗಳೊಂದಿಗೆ ವಿವಿಧ ಹೂಡಿಕೆ ಆಯ್ಕೆಗಳನ್ನು ನೀಡುತ್ತದೆ. ಅಂಚೆ ಕಚೇರಿಯ ಈ ಹೂಡಿಕೆ ಯೋಜನೆಯಲ್ಲಿ ಕೇವಲ 1500 ರೂ. ಗಳನ್ನು ಠೇವಣಿ ಮಾಡುವ ಮೂಲಕ 35 ಲಕ್ಷ ರೂಪಾಯಿ ಪಡೆಯುವುದು ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: ಯೋಯೋ ಟಿವಿ ಕನ್ನಡ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply