ನವದೆಹಲಿ: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಹೋಳಿ ಹಬ್ಬಕ್ಕೂ ಮುನ್ನ ಖುಷಿ ಸುದ್ದಿಯೊಂದನ್ನು ನೀಡಿದ್ದು, ಹೋಳಿ ಹಬ್ಬಕ್ಕಾಗಿ ವಿಶೇಷ ಫೆಸ್ಟಿವಲ್ ಅಡ್ವಾನ್ಸ್ ಸ್ಕೀಮ್ ಘೋಷಣೆ ಮಾಡಿದೆ.
ಹೌದು, ಹಬ್ಬವನ್ನು ಯಾವುದೇ ಕಷ್ಟವಿಲ್ಲದೆ ಆಚರಿಸಲು ಫೆಸ್ಟಿವಲ್ ಅಡ್ವಾನ್ಸ್ ಸ್ಕೀಮ್ ಮೂಲಕ ಕೇಂದ್ರ ನೌಕರರು ಶೂನ್ಯ ಬಡ್ಡಿ ದರದಲ್ಲಿ 10 ಸಾವಿರ ರೂ.ವರೆಗೆ ಅಡ್ವಾನ್ಸ್ ಪಡೆಯಬಹುದಾಗಿದೆ. ಈ ಹಣವನ್ನು ತಿಂಗಳಿಗೆ ರೂ .1000 ದರದಲ್ಲಿ ಪಾವತಿಸಿದರೆ ಸಾಕು.
ನೌಕರರು ಫೆಸ್ಟಿವಲ್ ಅಡ್ವಾನ್ಸ್ ಸ್ಕೀಮ್ ಅಡಿಯಲ್ಲಿ 10 ಸಾವಿರ ರೂ. ಅಡ್ವಾನ್ಸ್ ಪಡೆಯಲು ಕೊನೆಯ ದಿನಾಂಕ 2021ರ ಮಾರ್ಚ್ 31 ಆಗಿದೆ. ಈ ಹಿಂದೆ 6ನೇ ವೇತನ ಆಯೋಗದ ಪ್ರಕಾರ ನೌಕರರು ₹4500 ಪಡೆಯಬಹುದಾಗಿತ್ತು. ಈಗ ಅಡ್ವಾನ್ಸ್ ಮೊತ್ತವನ್ನು ಹೆಚ್ಚಿಸಲಾಗಿದೆ.