PM Kisan yojana : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಆರ್ಥಿಕ ಬೆಂಬಲ ನೀಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM Kisan yojana) ಜಾರಿಗೆ ತಂದಿದ್ದು, ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಈ ಹಣ ಹಾಕುತ್ತಿದೆ. ಇದಕ್ಕೆ ಮಧ್ಯವರ್ತಿಗಳ ಯಾವುದೇ ಕಾಟವಿಲ್ಲ.
ಸದ್ಯ ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ ರೂ 6000 ಅನ್ನು ಮೂರು ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಆದರೆ ಈಗ ಈ ಹಣವನ್ನು ವಾರ್ಷಿಕ 12,000 ರೂ.ಗಳಿಗೆ ಹೆಚ್ಚಳ ಮಾಡಲಾಗುತ್ತದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: Yuva Nidhi Yojana : ಇಂದಿನಿಂದ ʼಯುವನಿಧಿʼ ವಿಶೇಷ ನೋಂದಣಿ ಅಭಿಯಾನ
PM Kisan yojana : ಪಿಎಂ ಕಿಸಾನ್ 19ನೇ ಕಂತು ಯಾವಾಗ ಬರುತ್ತದೆ..?
ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣವು ಈಗಾಗಲೇ ಯಶಸ್ವಿಯಾಗಿ ಫಲಾನುಭವಿ ರೈತರ ಖಾತೆಗೆ ವರ್ಗಾವಣೆಯಾಗಿದ್ದು, ಸದ್ಯ ರೈತರು 19ನೇ ಕಂತಿನ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಆದರೆ, ಪಿಎಂ ಕಿಸಾನ್ ಯೋಜನೆಯ 19ನೇ ಕಂತನ್ನು ಫೆಬ್ರವರಿ 2025 ರ ಮೊದಲ ವಾರದಲ್ಲಿ ಜಮೆ ಮಾಡುವ ನೀರಿಕ್ಷೆಯಿದೆ ಎನ್ನಲಾಗಿದೆ. ಇದರ ಹಿಂದಿನ 18ನೇ ಕಂತಿನ ಹಣ ಅಕ್ಟೋಬರ್ 5, 2024 ರಂದು ಬಿಡುಗಡೆಯಾಗಿತ್ತು. ಸದ್ಯ ಈ ಕುರಿತು ಸಚಿವಾಲಯದಿಂದ ಯಾವುದೇ ಅಧಿಕೃತ ಘೋಷಣೆಗಳು ಹೊರಬಿದ್ದಿಲ್ಲ. ರೈತರು ಇದರೊಳಗಾಗಿ ಇ-ಕೆವೈಸಿ ಮಾಡಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ: Cold Alert | ಮುಂದಿನ ಒಂದು ವಾರ ಶೀತ ಗಾಳಿ, ಭಾರಿ ಚಳಿ ಮುನ್ಸೂಚನೆ