Human metanpneumovirus | ಏನಿದು ಚೀನಾದ ಹೂಮನ್ ಮೆಟಾನ್ಯುಮೊ ವೈರಸ್? ಭಾರತಕ್ಕೆ ಎಷ್ಟಿದೆ ಅಪಾಯ?

Human metanpneumovirus : ಹೂಮನ್ ಮೆಟಾನ್ಯುಮೊ ವೈರಸ್ (HMPV) ಎಂಬ ಹೊಸ ವೈರಸ್ ಚೀನಾದಲ್ಲಿ ವಿಶೇಷವಾಗಿ 14 ವರ್ಷದೊಳಗಿನ ಮಕ್ಕಳಲ್ಲಿ ಹರಡುತ್ತಿದ್ದು, ಚೀನಾದ ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಆಡಳಿತ ಈ ವೈರಸ್…

Human metanpneumovirus

Human metanpneumovirus : ಹೂಮನ್ ಮೆಟಾನ್ಯುಮೊ ವೈರಸ್ (HMPV) ಎಂಬ ಹೊಸ ವೈರಸ್ ಚೀನಾದಲ್ಲಿ ವಿಶೇಷವಾಗಿ 14 ವರ್ಷದೊಳಗಿನ ಮಕ್ಕಳಲ್ಲಿ ಹರಡುತ್ತಿದ್ದು, ಚೀನಾದ ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಆಡಳಿತ ಈ ವೈರಸ್ ಅನ್ನು ಪತ್ತೆ ಹಚ್ಚಿದ್ದು, ಇದು ಕೊರೊನಾ ರೋಗಕ್ಕಿಂತಲೂ ಹೆಚ್ಚಾಗಿರುತ್ತದೆ ಎನ್ನಲಾಗಿದೆ.

Human metanpneumovirus ಇತರ ದೇಶಗಳಿಗೂ ಲಗ್ಗೆ

ಮೊದಲಿಗೆ ಚೀನಾದಲ್ಲಿ ಕಾಣಿಸಿಕೊ೦ಡಿದ್ದ ಈ HMPV ವೈರಸ್ ಈಗಾಗಲೇ ಹಾಂಗ್ ಕಾಂಗ್ ಹಾಗೂ ಜಪಾನ್ ದೇಶದಲ್ಲಿಯೂ ಕಾಣಿಸಿಕೊಂಡಿದೆ ಎ೦ದು ವರದಿಯಾಗಿದೆ. ಅಲ್ಲದೆ ಉತ್ತರ ಕೊರಿಯಾದಲ್ಲಿಯೂ ಪ್ರಕರಣಗಳು ಪತ್ತೆಯಾಗುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ: PM Kisan yojana | ಪಿಎಂ ಕಿಸಾನ್ ಯೋಜನೆಯ ಹಣ 12,000‌ ರೂ.ಗೆ ಏರಿಕೆ..!?

Vijayaprabha Mobile App free

ಭಾರತದ ಮೇಲೆ ಪರಿಣಾಮ

ಸದ್ಯ ಭಾರತದಲ್ಲಿ HMPVಯ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಭಾರತ ಸರ್ಕಾರವು ಅಗತ್ಯ ಎಚ್ಚರಿಕೆಗಳನ್ನು ವಹಿಸುತ್ತಿದೆ.

ಈ ವೈರಸ್‌ನ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲಲ್ಲ.

2011-12ರ ಸುಮಾರಿಗೆ, ಯುಎಸ್ಎ, ಕೆನಡಾ ಮತ್ತು ಯುರೋಪ್‌ನಲ್ಲಿ ಹಲವಾರು ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: Yuva Nidhi Yojana : ಇಂದಿನಿಂದ ʼಯುವನಿಧಿʼ ವಿಶೇಷ ನೋಂದಣಿ ಅಭಿಯಾನ

Human metanpneumovirus ರೋಗ ಲಕ್ಷಣಗಳು

  • ಉಸಿರಾಟದ ತೊಂದರೆ
  • ಕೆಮ್ಮು
  • ಮೂಗು ಕಟ್ಟುವಿಕೆ
  • ಗಂಟಲು ನೋವು
  • ಉಬ್ಬಸ
  • ಶೀತ
  • ಜ್ವರ

Human metanpneumovirus ಹೇಗೆ ಹರಡುತ್ತದೆ?

ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ. ಇದು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ, ಸೋಂಕಿತ ವ್ಯಕ್ತಿಯ ಕೆಮ್ಮುವಿಕೆ ಮತ್ತು ಸೀನುವಿಕೆಯಿ೦ದ ಹರಡಬಹುದು. ಕಲುಷಿತ ಮೇಲ್ಮಗಳನ್ನು ಸ್ಪರ್ಶಿಸುವುದು ಮತ್ತು ನ೦ತರ ಬಾಯಿ, ಮೂಗು, ಅಥವಾ ಕಣ್ಣುಗಳನ್ನು ಸ್ಪರ್ಶಿಸುವುದರಿಂದ ಹರಡಬಹುದು.

ಇದನ್ನೂ ಓದಿ: Cold Alert | ಮುಂದಿನ ಒಂದು ವಾರ ಶೀತ ಗಾಳಿ, ಭಾರಿ ಚಳಿ ಮುನ್ಸೂಚನೆ

Human metanpneumovirus ಅಬ್ಬರ.. ಮಾಸ್ಕ್ ಧರಿಸುವ ಅಗತ್ಯವಿದೆಯೇ?

ಎಚ್‌ಎಂಪಿವಿ ವೈರಸ್ ಚೀನಾದಲ್ಲಿ ಸಾಕಷ್ಟು ತೊಂದರೆಗಳನ್ನು ಉಂಟುಮಾಡುತ್ತಿದೆ. ಈ ವೈರಸ್ ಹರಡುವಿಕೆಯಿಂದ ಭಾರತದಲ್ಲಿಯೂ ಜನರಲ್ಲಿ ಭಯ ಆವರಿಸಿಕೊಂಡಿದೆ. ನೆಗಡಿ ಮತ್ತು ಕೆಮ್ಮು ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸರ್ಕಾರ ಸೂಚಿಸಿದೆ.

ಮನೆಯಿಂದ ಹೊರಗೆ ಹೋಗುವಾಗ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಉತ್ತಮ. ವಿಶೇಷವಾಗಿ ನಗರ ಮತ್ತು ಪಟ್ಟಣಗಳಲ್ಲಿ ವಾಸಿಸುವವರು ಇದನ್ನು ಧರಿಸಬೇಕು. ನಮ್ಮಲ್ಲಿ ಈ HMPV ವೈರಸ್ ಇಲ್ಲದಿದ್ದರೂ ಚಳಿಗಾಲವಾಗಿದ್ದರಿಂದ ನಾನಾ ರೀತಿಯ ಜ್ವರ, ವೈರಸ್ ಗಳು ಬರುವ ಸಾಧ್ಯತೆ ಇದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.