PM Kisan : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಶನಿವಾರ ಅನ್ನದಾತರ ಖಾತೆಗೆ 18ನೇ ಕಂತಿನ ಹಣ ಬಿಡುಗಡೆ ಆಗಿದ್ದು, ಪ್ರತೀ ರೈತರ ಖಾತೆಗಳಿಗೆ 2,000 ರೂ ಹಣ ಸಿಗುತ್ತಿದೆ. ಇಕೆವೈಸಿ ಪುರ್ಣಗಳಿಸಿದ ರೈತರ ಖಾತೆಗೆ ರೂ.2,000 ಜಮಾ ಆಗಿಲ್ಲ.
ಆದ್ರೆ ಪಿಎಂ ಕಿಸಾನ್ ಯೋಜನೆ ಲಾಭ ಪಡೆಯಲು ಕೆಲವು ಮಾನದಂಡಗಳಿವೆ. ಇವುಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳು, ಸಂಸ್ಥೆಗಳ ಹಾಲಿ ಮತ್ತು ನಿವೃತ್ತ ಉದ್ಯೋಗಿಗಳು ಕುಟುಂಬದಲ್ಲಿ ಇರಬಾರದು. ತಿಂಗಳಿಗೆ 10,000 ರೂ.ಗೂ ಹೆಚ್ಚು ಮೊತ್ತದ ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರು ಕುಟುಂಬದಲ್ಲಿ ಇರುವಂತಿಲ್ಲ. ವೈದ್ಯ, ಎಂಜಿನಿಯರ್, ವಕೀಲ, ಸಿಎ, ಆರ್ಕಿಟೆಕ್ಟ್ ಇತ್ಯಾದಿ ವೃತ್ತಿಪರರು ಕುಟುಂಬದಲ್ಲಿ ಇರುವಂತಿಲ್ಲ.
ಇದನ್ನೂ ಓದಿ: ಖಾತೆಗೆ ರೂ.2,000 ಜಮಾ ಆಗಿಲ್ಲವೇ? ಹೀಗೆ ಮಾಡಿ
PM Kisan : ಫೋನ್‌ನಲ್ಲೇ ಹೀಗೆ ಚೆಕ್ ಮಾಡಿ..
- ಇನ್ನು, PM ಕಿಸಾನ್ ಯೋಜನೆಯ ಅರ್ಹ ರೈತರು ಮೊಬೈಲ್‌ನಲ್ಲಿ ತಮ್ಮ ಸ್ಥಿತಿಯನ್ನು ಪರಿಶೀಲಿಸಬಹುದು.
- ಇದಕ್ಕಾಗಿ, pmkisan.gov.inಗೆ ಹೋಗಿ & ರೈತರ ಕಾರ್ನರ್‌ನಲ್ಲಿ ‘ಫಲಾನುಭವಿಗಳ ಪಟ್ಟಿ’ ಆಯ್ಕೆಯನ್ನು ಆರಿಸಿ.
- ಇದರ ನಂತರ, ರಾಜ್ಯ & ಜಿಲ್ಲೆ ಸೇರಿದಂತೆ ಇತರ ವಿವರಗಳನ್ನು ಭರ್ತಿ ಮಾಡಿ & ವರದಿ ಪಡೆಯಿರಿ ಕ್ಲಿಕ್ ಮಾಡಿ.
- ಜಿಲ್ಲೆ, ತಾಲೂಕು & ಗ್ರಾಮ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ‘ಔಟ್ ರಿಪೋರ್ಟ್’ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು.