ಬೆಂಗಳೂರು: ರಾಜ್ಯದಲ್ಲಿ ಇಂದು ತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹94.22 (₹0.07 ಪೈಸೆ ಇಳಿಕೆ) ಆಗಿದ್ದು, ಡೀಸೆಲ್ ದರ ₹86.37 (₹0.05 ಪೈಸೆ ಇಳಿಕೆ) ಆಗಿದೆ.
ಬಳ್ಳಾರಿಯಲ್ಲಿ 1 ಲೀಟರ್ ಪೆಟ್ರೋಲ್ ದರ ₹95.36 (₹0.80 ಪೈಸೆ ಇಳಿಕೆ) ಇಳಿಕೆಯಾಗಿದ್ದು, 1 ಲೀಟರ್ ಡೀಸೆಲ್ ದರ ₹87.43 (₹0.73 ಪೈಸೆ ಇಳಿಕೆ) ಆಗಿದೆ. ಇನ್ನು ಮೈಸೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹94.12 (₹0.19 ಪೈಸೆ ಇಳಿಕೆ) ಆಗಿದ್ದು, 1 ಲೀಟರ್ ಡೀಸೆಲ್ ದರ ₹86.27(₹0.17 ಪೈಸೆ ಇಳಿಕೆ) ಆಗಿದೆ.
ಚಿನ್ನ, ಬೆಳ್ಳಿಯ ದರದಲ್ಲಿ ಇಳಿಕೆ:
ಇನ್ನು ದೇಶದಲ್ಲಿ ಇಂದು ಚಿನ್ನದ ಬೆಲೆ ಕಡಿಮೆಯಾಗಿದ್ದು, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 44,290 ರೂ. ಇದ್ದುದು 43,910 ರೂ.ಗೆ ಇಳಿಕೆಯಾಗಿದೆ. ನಿನ್ನೆ10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 44,970 ರೂ.ಇದ್ದು, ಇಂದು 44,910 ರೂ. ಆಗಿದ್ದು, 1 ಕೆಜಿ ಬೆಳ್ಳಿ ಬೆಲೆ ನಿನ್ನೆ 67,000 ರೂ.ಇದ್ದು, ಇಂದು 1 ಕೆಜಿಗೆ 66,600 ರೂ. ಇಳಿಕೆಯಾಗಿದೆ.
ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 45,880 ರೂ. ಇದ್ದು, 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಇಂದು 42,050 ರೂ. ಆಗಿದ್ದು, ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು 67,500 ರೂ. ಆಗಿದೆ.