ಬೆಂಗಳೂರು: ರಾಜ್ಯದ ವಿವಿಧೆಡೆ ಇಂದು ಪೆಟ್ರೋಲ್ ದರ ಇಳಿಕೆಯಾಗಿದ್ದು, ಚಿಕ್ಕಮಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹94.13 (₹0.78 ಪೈಸೆ ಇಳಿಕೆ) ಆಗಿದ್ದು,1 ಲೀಟರ್ ಡೀಸೆಲ್ ದರ ₹86.13 (₹0.79 ಪೈಸೆ ಇಳಿಕೆ) ದಾಖಲಾಗಿದೆ.
ಶಿವಮೊಗ್ಗದಲ್ಲಿ 1 ಲೀಟರ್ ಪೆಟ್ರೋಲ್ ದರ ₹94.06 (₹0.72 ಪೈಸೆ ಇಳಿಕೆ) ಆಗಿದ್ದು, 1 ಲೀ. ಡೀಸೆಲ್ ದರ ₹86.10 (₹0.65 ಪೈಸೆ ಇಳಿಕೆ) ಆಗಿದೆ. ಇನ್ನು ಧಾರವಾಡದಲ್ಲಿ 1 ಲೀ. ಪೆಟ್ರೋಲ್ ದರ ₹93.26 (₹0.12 ಪೈಸೆ ಇಳಿಕೆ) ಆಗಿದ್ದು,1 ಲೀ. ಡೀಸೆಲ್ ದರ ₹85.47 (₹0.11 ಪೈಸೆ ಇಳಿಕೆ) ಆಗಿದೆ.
ಏರಿಕೆ ಕಂಡ ಚಿನ್ನ, ಬೆಳ್ಳಿ ದರ:
ದೇಶದಲ್ಲಿ ಗುರುವಾರ ಚಿನ್ನ, ಬೆಳ್ಳಿ ದರ ಏರಿಕೆಯಾಗಿದ್ದು,1 ಗ್ರಾಂ ಚಿನ್ನದ ಬೆಲೆ ₹4,520 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹44,850 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹48,930 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹68,800 ಆಗಿದೆ.
ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,200 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹46,200 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ದರ ₹68,800 ದಾಖಲಾಗಿದೆ.