ಬೆಂಗಳೂರು: ರಾಜ್ಯದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆಯಾಗಿದ್ದು, 1 ಲೀಟರ್ ಪೆಟ್ರೋಲ್ ದರ ₹96.93 (₹0.20 ಪೈಸೆ ಏರಿಕೆ) ಆಗಿದ್ದು, 1 ಲೀಟರ್ ಡೀಸೆಲ್ ದರ ₹89.71 (₹0.30 ಪೈಸೆ ಏರಿಕೆ) ದಾಖಲಾಗಿದೆ.
ಇನ್ನು, ರಾಜ್ಯದ ವಿವಿಧ ನಗರಗಳಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯಾದ ಬಳಿಕ ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ಬೆಲೆ ₹96.31/ ಇದ್ದು, ಡೀಸೆಲ್ ದರ ₹89.12 ಇದೆ.
ಇನ್ನು ಬಳ್ಳಾರಿಯಲ್ಲಿ 1 ಲೀ. ಪೆಟ್ರೋಲ್ ಬೆಲೆ ₹98.20 ಇದ್ದು, ದಾವಣಗೆರೆಯಲ್ಲಿ 1 ಲೀ. ಪೆಟ್ರೋಲ್ ದರ ₹98.19 ಆಗಿದೆ.
ಭಾನುವಾರದ ಚಿನ್ನ, ಬೆಳ್ಳಿ ದರ:
ದೇಶದಲ್ಲಿ ಭಾನುವಾರ ಚಿನ್ನದ ಬೆಲೆ ಸ್ಥಿರವಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,600 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,600 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹49,750 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹71,100 ಆಗಿದೆ.
ಇನ್ನು ಹೈದರಾಬಾದಿನಲ್ಲಿ ಸಹ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,600 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹49,750 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ದರ ₹75,700 ಆಗಿದೆ.