News in 2024: 2025ರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. 2024ರಲ್ಲಿ ಸಾಕಷ್ಟು ಸೆನ್ಸೇಷನಲ್ ಘಟನೆಗಳು ಸಂಭವಿಸಿದೆ. ಕೆಲವೊಂದು ವಿಚಾರಗಳು ಅಚ್ಚರಿಗೂ ಕಾರಣವಾಗಿವೆ. ರಾಜಕೀಯ ನಾಯಕರು, ಸಿನಿಮಾ ನಟರು ಸೇರಿದಂತೆ ಸ್ವಾಮೀಜಿಗಳು ಕೂಡ ತರಹೇವಾರಿ ಹೇಳಿಕೆ ನೀಡುವ ಮೂಲಕ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಕೆಲವರಂತೂ ಜೈಲಿಗೆ ಹೋಗಿ ಬಂದಿದ್ದೂ ಇದೆ. ಸದ್ದು ಮಾಡಿ ಸುದ್ದಿ ಮಾಡಿದವರ ಲಿಸ್ಟ್’ನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್-ರೇಣುಕಾಸ್ವಾಮಿ ಪ್ರಕರಣ ಮೊದಲಿರುತ್ತದೆ.
News in 2024: ಸದ್ದು ಮಾಡಿ ಸುದ್ದಿಯಾದವರಾರು?
*ತಿರುಪತಿ ದೇವಸ್ಥಾನದ ನೈವೇದ್ಯದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.
*ಶಿವನು ರಾಮ (BJP)ನ ಸಮಾನವಾಗಿ ಸ್ಪರ್ಧೆ ಮಾಡಬಹುದು ಎಂದು ರಾಮ ಹಾಗೂ ಶಿವನ ನಡುವೆ ಸಂಬಂಧ ಸೃಷ್ಟಿಸಿ ಖರ್ಗೆ ವಿವಾದಕ್ಕೆ ಕಾರಣರಾಗಿದ್ದರು.
*ಪುಷ್ಪಾ 2 ಸಿನಿಮಾ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ನಟ ಅಲ್ಲು ಅರ್ಜುನ್ (Allu Arjun) ಬಂಧನವಾಗಿತ್ತು.
*ಸಂಸದೆ ಕಂಗನಾಗೆ ಕಾನ್‌ಸ್ಟೇಬಲ್ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದು ಸಾಕಷ್ಟು ಸದ್ದು ಮಾಡಿತ್ತು.
ಇದನ್ನೂ ಓದಿ: Ration card | ರೇಷನ್ ಕಾರ್ಡ್ ತಿದ್ದುಪಡಿಗೆ ಕೆಲ ದಿನಗಳಷ್ಟೇ ಬಾಕಿ; ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ
*ವಕ್ಫ್ ವಿರುದ್ಧ ಹೋರಾಟಕ್ಕೆ ಕರೆ ಕೊಡುವ ಭರದಲ್ಲಿ ಯತ್ನಾಳ್, ಬಸವಣ್ಣನವರ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆ ಎಂದು ವಿವಾದಕ್ಕೆ ಸಿಲುಕಿದ್ದರು.
*ನಟಿ ನಯನತಾರಾ (Nayanthara) ಹಾಗೂ ನಟ ಧನುಷ್ (Dhanush) ನಡುವಿನ ಕೋಲ್ಡ್ ವಾರ್
*ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದರು.
*ಉಪಚುನಾವಣೆ ಅಖಾಡದಲ್ಲಿ ಪ್ರಚಾರ ವೇಳೆ ಸಚಿವ ಜಮೀರ್ ಹೆಚ್ಡಿಕೆ ಅವರನ್ನು ಕರಿಯ ಎಂದಿದ್ದರು.
*ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹಾಗೂ ಸಿಟಿ ರವಿ ಅವರ ನಡುವಿನ ‘ಅಶ್ಲೀಲ’ ಜಟಾಪಟಿ ತಾರಕಕ್ಕೇರಿತ್ತು.
*ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದ್ರೆ ಬಳಿಕ ತಾನು ಬದುಕಿರುವುದಾಗಿ ತಿಳಿಸಿದ್ದರು.
*ರಾಜ್ಯ ಸಭೆ ಚುನಾವಣೆ ಗೆದ್ದ ಖುಷಿಯ ನಡುವೆ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಸುತ್ತ ವಿವಾದ ಸುತ್ತು ಹಾಕಿಕೊಂಡಿತ್ತು. ನಾಸೀರ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: Heavy rain | ರಾಜ್ಯದಲ್ಲಿ ಇನ್ನೆರಡು ದಿನ ಮಳೆ