ರಾಜ್ಯದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಎರಡು ಭೀಕರ ರಸ್ತೆ ಅಪಘಾತವಾಗಿದ್ದು, ಬೆಳಗಾವಿ ತಾಲ್ಲೂಕಿನ ಕಣಬರಗಿ ಸಮೀಪ ಕ್ರೂಸರ್ ನಾಲಾಕ್ಕೆ ಬಿದ್ದು, 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಕ್ಕತಂಗಿಯರ ಹಾಳದಿಂದ ಬರುತ್ತಿದ್ದ ಕ್ರೂಸರ್ ಬಳ್ಳಾರಿ ನಾಲಾಕ್ಕೆ ಬಿದ್ದು, ಈ ದುರ್ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ, ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಭೀಕರ ಅಪಘಾತದಲ್ಲಿ ಮೂವರ ದುರ್ಮರಣ:
ಬೆಳ್ಳಂಬೆಳಗ್ಗೆ ಅಪಘಾತಗಳದ್ದೇ ಸುದ್ದಿಯಾಗಿದ್ದು, ಎರಡು ಭೀಕರ ಅಪಘಾತದಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಕ್ರೂಸರ್ ಅಪಘಾತದಲ್ಲಿ 7 ಜನರು ಸ್ಥಳದಲ್ಲೇ ಮೃತಪಟ್ಟರೆ,
ಮಂಡ್ಯದ ನಾಗಮಂಗಲ ತಾಲೂಕಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ದುರ್ಮರಣಕ್ಕೀಡಾಗಿದ್ದಾರೆ.
ನಾಗಮಂಗಲದಲ್ಲಿ ಲಾರಿ-ಕಾರು ನಡುವಿನ ಅಪಘಾತದಲ್ಲಿ ಗ್ರಾಮ ಲೆಕ್ಕಿಗ ದೇವರಾಜ್, ಗ್ರಾಮ ಸಹಾಯಕ ಮಂಜುನಾಥ್, ರೈತ ಮಂಜಯ್ಯ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.