PAN Card Aadhar Link : ಇಂದು ಆಧಾರ್ ಕಾರ್ಡ್‌ನಷ್ಟೇ ಪ್ಯಾನ್ ಕಾರ್ಡ್ ಕೂಡ ಅತ್ಯಗತ್ಯ ದಾಖಲೆ. ಯಾವುದೇ ಹಣಕಾಸು ವ್ಯವಹಾರ, ಬ್ಯಾಂಕ್ ಖಾತೆ ತೆರೆಯುವುದು ಅಥವಾ ತೆರಿಗೆ ರಿಟರ್ನ್ ಸಲ್ಲಿಸುವುದರಲ್ಲಿಯೂ ಪ್ಯಾನ್ ಕಡ್ಡಾಯವಾಗಿದೆ. ಸರ್ಕಾರವು ಗುರುತಿನ ವಂಚನೆ, ನಕಲಿ ಪ್ಯಾನ್ ಹಾಗೂ ಆರ್ಥಿಕ ವಂಚನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಡಿಸೆಂಬರ್ 31, 2025 ಈ ಪ್ರಕ್ರಿಯೆಯ ಗಡುವು ದಿನಾಂಕವಾಗಿದ್ದು, ಜನವರಿ 1, 2026 ರಿಂದ ಲಿಂಕ್ ಮಾಡದ ಪ್ಯಾನ್‌ಗಳು ನಿಷ್ಕ್ರಿಯಗೊಳ್ಳಲಿವೆ.
ಲಿಂಕ್ ಮಾಡುವ ಅಗತ್ಯ & ಪರಿಣಾಮಗಳು

ನಿಮ್ಮ ಪ್ಯಾನ್ ಕಾರ್ಡ್ ಆಧಾರ್‌ಗೆ ಲಿಂಕ್ ಆಗದಿದ್ದರೆ, ಅದನ್ನು ತೆರಿಗೆ ರಿಟರ್ನ್, ಬ್ಯಾಂಕ್ ಖಾತೆ, ಹೂಡಿಕೆ ಅಥವಾ ಯಾವುದೇ ಅಧಿಕೃತ ಹಣಕಾಸು ವ್ಯವಹಾರಗಳಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ಪ್ಯಾನ್ ಕಾರ್ಡ್ ಅಮಾನ್ಯವಾದರೆ, ನಿಮ್ಮ ಐಟಿಆರ್ ಸಲ್ಲಿಕೆಯಿಂದ ಹಿಡಿದು ಹೊಸ ಬ್ಯಾಂಕ್ ಖಾತೆ ತೆರೆಯುವ ತನಕ ಎಲ್ಲವೂ ಅಸಾಧ್ಯವಾಗುತ್ತದೆ. ಆದ್ದರಿಂದ ಲಿಂಕ್ ಮಾಡುವುದು ಕೇವಲ ಕಾನೂನು ಬದ್ಧತೆ ಮಾತ್ರವಲ್ಲ, ಹಣಕಾಸು ಭದ್ರತೆಗೆ ಅಗತ್ಯ ಕ್ರಮವಾಗಿದೆ.
ಲಿಂಕ್ ಮಾಡುವ ಸರಳ ಆನ್‌ಲೈನ್ ವಿಧಾನ
ಆಧಾರ್-ಪ್ಯಾನ್ ಲಿಂಕ್ ಮಾಡಲು ನೀವು ಮನೆಯಲ್ಲಿಯೇ ಸುಲಭವಾಗಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಮೊದಲು ಅಧಿಕೃತ ಆಧಾಯ ತೆರಿಗೆ ವೆಬ್ ಸೈಟ್ https://www.incom-etax.gov.in. ‘Link Aadhaar’ ಆಯ್ಕೆಯಾ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಹೆಸರು ನಮೂದಿಸಿ. ನಂತರ ನಿಮ್ಮನೋಂದಾಯಿತ ಮೊಬೈಲ್ ಸಂಖ್ಯೆಗೆ ಬ೦ದ OTP ಅನ್ನು ದೃಢೀಕರಿಸಿ. ನೀವು ಹಿಂದಿನ ಗಡುವಿನ ನಂತರ ಲಿಂಕ್ ಮಾಡುತ್ತಿದ್ದರೆ, ₹1,000 ಶುಲ್ಕ ಪಾವತಿಸಬೇಕಾಗುತ್ತದೆ. OTP ದೃಢೀಕರಣ ಮತ್ತು ಪಾವತಿಯ ನಂತರ ಲಿಂಕ್ ಪ್ರಕ್ರಿಯೆ ಯಶಸ್ವಿಯಾಗುತ್ತದೆ.
SMS ಮೂಲಕ ಲಿಂಕ್ ಮಾಡುವ ಪರ್ಯಾಯ ವಿಧಾನ
ಆಧಾರ್-ಪ್ಯಾನ್ ಲಿಂಕ್ ಮಾಡಲು ಇಂಟರ್ನೆಟ್ ಅವಶ್ಯಕವಿಲ್ಲ. SMS ಮೂಲಕವೂ ನೀವು ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ‘UIDPAN <ಆಧಾರ್ ಸಂಖ್ಯೆ > <ಪ್ಯಾನ್ ಸಂಖ್ಯೆ>’ ಎಂಬ ಸಂದೇಶವನ್ನು <567678> ಅಥವಾ <56161> ಗೆ ಕಳುಹಿಸಿ. ಉದಾಹರಣೆಗೆ: UIDPAN 987654321012 ABC-DE1234F. ಕೆಲವು ಕ್ಷಣಗಳಲ್ಲಿ ನಿಮ್ಮ ಪ್ಯಾನ್ & ಆಧಾರ್ ಲಿಂಕ್ ದೃಢೀಕರಣ ಸಂದೇಶ ನಿಮಗೆ ಬರುತ್ತದೆ.
ಹಣಕಾಸು ಭದ್ರತೆಗಾಗಿ ಇಂದುಲೇ ಲಿಂಕ್ ಮಾಡಿ
ಸರ್ಕಾರದ ಎಚ್ಚರಿಕೆ ಸ್ಪಷ್ಟ- ಡಿಸೆಂಬರ್ 31, 2025 ರೊಳಗೆ ಲಿಂಕ್ ಮಾಡದಿದ್ದರೆ, ಜನವರಿ 1, 2026 ರಿಂದ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಲಿದೆ. ಇದರ ಪರಿಣಾಮವಾಗಿ ಬ್ಯಾಂಕಿಂಗ್, ಹೂಡಿಕೆ, ತೆರಿಗೆ, ಮತ್ತು ಇತರ ಹಣಕಾಸು ಸೇವೆಗಳಲ್ಲಿ ತೊಂದರೆ ಎದುರಾಗುತ್ತದೆ. ಆದ್ದರಿಂದ ತಡಮಾಡದೆ, ಇ೦ದೇ ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡಿ, ನಿಮ್ಮ ಹಣಕಾಸು ಭದ್ರತೆಯನ್ನು ಕಾಪಾಡಿಕೊಳ್ಳಿ.



