ಡೆಡ್ಲಿ ಕರೋನ ವೈರಸ್ ಗೆ ಒಂದೇ ದಿನದ ಅಂತರದಲ್ಲಿ ಅಕ್ಕ-ತಮ್ಮ ಬಲಿ: ಕುಟುಂಬದಲ್ಲಿ ಮಡುಗಟ್ಟಿದ ಶೋಕ!

ವಿಜಯನಗರ: ಮಾಹಾಮಾರಿ ಕೊರೊನಾ ವೈರಸ್ ಗೆ ಒಂದೇ ದಿನದ ಅಂತರದಲ್ಲಿ ಅಕ್ಕ-ತಮ್ಮ ಬಲಿಯಾಗಿದ್ದು, ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್(45) ಮತ್ತು ಇವರ ತಮ್ಮ ಸಾವಿಯೋ ಸ್ಮಿತ್(42) ಇಬ್ಬರೂ ಒಂದು…

ವಿಜಯನಗರ: ಮಾಹಾಮಾರಿ ಕೊರೊನಾ ವೈರಸ್ ಗೆ ಒಂದೇ ದಿನದ ಅಂತರದಲ್ಲಿ ಅಕ್ಕ-ತಮ್ಮ ಬಲಿಯಾಗಿದ್ದು, ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್(45) ಮತ್ತು ಇವರ ತಮ್ಮ ಸಾವಿಯೋ ಸ್ಮಿತ್(42) ಇಬ್ಬರೂ ಒಂದು ದಿನದ ಅಂತರದಲ್ಲಿ ಕೊನೆಯುಸಿರೆಳೆದಿದ್ದಾರೆ.

ಹೌದು, ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಅವರು ಹೊಸಪೇಟೆಯ ಜನನಿ ಮಹಿಳಾ ಸಬಲೀಕರಣ ಸಂಘಟನೆಯಲ್ಲೂ ಸೇವೆ ಸಲ್ಲಿಸುತ್ತಿದ್ದರು. ಅಷ್ಟೇ ಅಲ್ಲದೆ, ಹೊಸಪೇಟೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕೋವಿಡ್ ಸಮೀಕ್ಷೆ ಕಾರ್ಯದಲ್ಲಿ ಸ್ವಯಂ ಸೇವಕಿಯಾಗಿದ್ದರು.

ಕ್ಯಾರೋಲಿನ್ ಲೂಸಿಯಾ ಸ್ಮಿತ್ ಮತ್ತು ಅವರ ತಮ್ಮ ಸಾವಿಯೋ ಸ್ಮಿತ್ ಇಬ್ಬರಿಗೂ ಕಳೆದ ವಾರ ಕರೊನಾ ಸೋಂಕು ತಗುಲಿದ್ದು, ಇಬ್ಬರು ಕಳೆದ 8 ದಿನಗಳಿಂದ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಮ್ಮ ಮೃತಪಟ್ಟಿದ್ದು, ಇಂದು ಅಕ್ಕ ಕೊನೆಯುಸಿರೆಳೆದಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.