ಚೆನ್ನೈ: ಇತ್ತೀಚೆಗೆ ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟಿ ಯಶಿಕಾ ಆನಂದ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಲೈವ್ ಚಾಟಿಂಗ್ ನಡೆಸುವ ವೇಳೆ ಕಹಿ ಅನುಭವವನ್ನು ಎದುರಿಸಿದ್ದಾರೆ.
ಹೌದು, ಅಭಿಮಾನಿ ಕಿಡಿಗೇಡಿಯೊಬ್ಬ ನಟಿ ಯಶಿಕಾ ಅವರ ಸ್ತನಗಳ ಗಾತ್ರದ ಬಗ್ಗೆ ಪಶ್ನಿಸಿದ್ದನು. ಇದಕ್ಕೆ ಖಡಕ್ ಉತ್ತರ ಕೊಟ್ಟ ನಟಿ ಯಶಿಕಾ ‘ನಿಮ್ಮ ಚೆಂಡುಗಳಿಗಿಂತ ದೊಡ್ಡದಾಗಿವೆ’ ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. ನಟಿ ಯಶಿಕಾ ನೀಡಿದ ಈ ಖಡಕ್ ಉತ್ತರಕ್ಕೆ ಅವರ ಅಭಿಮಾನಿಗಳು ಮತ್ತು ಸಾಮಾಜಿಕ ಜಾಲತಾಣ ಹಿಂಬಾಲಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ನು, ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ ಅಭಿನಯದ ನೋಟಾ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದ ಯಶಿಕಾ ತಮಿಳಿನಲ್ಲಿ ಸಹ ಹಲವು ಚಿತ್ರಗಳಿಗೆ ಸಹಿ ಮಾಡಿದ್ದು ಸಿಕ್ಕಾಪಟ್ಟೆ ಬಿಜಿಯಾಗಿದ್ದರು. ಆದರೆ, ಕರೊನಾ ಲಾಕ್ಡೌನ್ ಹಿನ್ನೆಲೆ ಶೂಟಿಂಗ್ ಸ್ತಬ್ಧವಾಗಿದ್ದು, ಶೂಟಿಂಗ್ ಇಲ್ಲದ ಕಾರಣ ನಟಿ ಯಶಿಕಾ ತನ್ನ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದ ಸಂವಹನ ನಡೆಸುತ್ತಿರುತ್ತಾರೆ.