ಇಂದು ಅಂತರಾಷ್ಟ್ರೀಯ ವಿಶ್ವ ಹುಲಿ ದಿನವಾಗಿದ್ದು, ಇದೀಗ ಕರ್ನಾಟಕ ಹುಲಿಗಳ ರಾಜಧಾನಿ ಎಂಬ ಹೆಗ್ಗಳಿಕೆಯನ್ನ ತನ್ನದಾಗಿಸಿಕೊಂಡಿದೆ. ಹೌದು, ಹುಲಿಗಳ ಸಂಖ್ಯೆ ಶೇ 18 ರಿಂದ 20ರಷ್ಟು ಹೆಚ್ಚಾಗಿದ್ದು, ಒಟ್ಟು ಹುಲಿಗಳ ಸಂಖ್ಯೆಯಲ್ಲೂ ಕೂಡಾ ಏರಿಕೆಯಾಗಿದ ಎನ್ನಲಾಗಿದೆ.
ಇನ್ನು ಸಾವಿನ ಪ್ರಕರಣವೂ ರಾಜ್ಯದಲ್ಲಿ ಕಡಿಮೆಯಾಗಿದ್ದು, ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ, ಕಾಳಿ, ಭದ್ರಾ, ಬಿಳಿಗಿರಿರಂಗನಬೆಟ್ಟ ಸೇರಿ ಒಟ್ಟು ಐದು ಹುಲಿ ಸಂರಕ್ಷಿತ ಪ್ರದೇಶಗಳು ಇವೆ. ಕಳೆದ 10 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ದುಪ್ಪಟ್ಟಾಗಿದೆ ಎನ್ನಲಾಗಿದೆ.
ಹುಲಿಗಳ ಬಗ್ಗೆ ಇಲ್ಲಿದೆ ಕೆಲ ಮಾಹಿತಿ:
ಪ್ರಪಂಚದಲ್ಲಿ ಸುಮಾರು 4 ಸಾವಿರ ಹುಲಿಗಳಿದ್ದು, ಅವುಗಳಲ್ಲಿ ಶೇ.70ಕ್ಕಿಂತ ಹೆಚ್ಚು ಹುಲಿಗಳು ನಮ್ಮ ದೇಶದಲ್ಲಿ ಕಂಡುಬರುತ್ತದೆ. ದೇಶದಾದ್ಯಂತ 53 ಹುಲಿ ಅಭಯಾರಣ್ಯಗಳಿದ್ದು, 2006ರಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ 1,411 ಇದ್ದರೆ, 2018ರ ವೇಳೆಗೆ 2,967ಕ್ಕೆ ತಲುಪಿದೆ. ಇನ್ನು, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಹುಲಿಗಳಿದ್ದು, ಹುಲಿಗಳ ರಕ್ಷಣೆಗೆ ಸರ್ಕಾರಗಳು ವಿಶೇಷ ಮುಂಜಾಗ್ರತೆ ವಹಿಸುತ್ತಿವೆ.