Noel Tata : ರತನ್ ಟಾಟಾ ಉತ್ತರಾಧಿಕಾರಿ ನೋಯೆಲ್ ಟಾಟಾ ನೇಮಕ; ಯಾರು ಈ ನೋಯೆಲ್ ಟಾಟಾ ?

Noel Tata : ಟಾಟಾ ಗ್ರೂಪ್​ಗೆ ಹೊಸ ವಾರಸುದಾರರ ಆಯ್ಕೆಯಾಗಿದ್ದು, ನೋಯೆಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ನ ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇಂದು ಶುಕ್ರವಾರ ಟಾಟಾ ಟ್ರಸ್ಟ್​ಗಳ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ…

Ratan Tata and Noel Tata

Noel Tata : ಟಾಟಾ ಗ್ರೂಪ್​ಗೆ ಹೊಸ ವಾರಸುದಾರರ ಆಯ್ಕೆಯಾಗಿದ್ದು, ನೋಯೆಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ನ ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇಂದು ಶುಕ್ರವಾರ ಟಾಟಾ ಟ್ರಸ್ಟ್​ಗಳ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ ನೋಯಲ್ ಅವರ ಪರವಾಗಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ದಿವಂಗತ ರತನ್ ಟಾಟಾ ನಿಧನದ ನಂತರ ಈ ಜವಾಬ್ದಾರಿಯನ್ನು ನೋಯೆಲ್ ಟಾಟಾಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ: ಆ ಉದ್ಯೋಗಿಗಳಿಗೆ EPFO ಗುಡ್ ನ್ಯೂಸ್.. ಒಬ್ಬೊಬ್ಬರ ಖಾತೆಗೆ 13,816 ರೂ..!

Vijayaprabha Mobile App free

ರತನ್ ಟಾಟಾ ಅವರ ಉತ್ತರಾಧಿಕಾರಿ ನೋಯೆಲ್ ಟಾಟಾ ಯಾರು?

67 ವರ್ಷದ ನೋಯಲ್ ಟಾಟಾ ಅವರು ರತನ್ ಟಾಟಾ ತಂದೆಯ ಎರಡನೇ ಪತ್ನಿಯ ಮಗ. ರತನ್ ಟಾಟಾ ಮಲ ಸಹೋದರ ನೋಯೆಲ್ ಟಾಟಾರನ್ನು ಅವರ ಉತ್ತರಾಧಿಕಾರಿಯಾಗಿ ಪರಿಗಣಿಸಲಾಗಿದೆ.

ನೋಯೆಲ್, ವೆಸ್ಟ್‌ಸೈಡ್ ಮತ್ತು ಝುಡಿಯೊ ಮಾತೃಸಂಸ್ಥೆ ಟ್ರೆಂಟ್, ಟಾಟಾ ಇಂಟರ್‌ನ್ಯಾಶನಲ್, ವೋಲ್ಟಾಸ್, ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ ಅಧ್ಯಕ್ಷರಾಗಿ ಮತ್ತು ಟಾಟಾ ಸ್ಟೀಲ್ ಮತ್ತು ಟೈಟಾನ್‌ ಉಪಾಧ್ಯಕ್ಷರಾಗಿ ವಿವಿಧ ಟಾಟಾ ಕಂಪನಿಗಳ ಮಂಡಳಿಯಲ್ಲಿದ್ದಾರೆ. ಅವರು ಸಸೆಕ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, INSEADನಿಂದ ಇಂಟರ್‌ನ್ಯಾಷನಲ್ ಎಕ್ಸಿಕ್ಯೂಟಿವ್ ಪ್ರೋಗ್ರಾಂ ಪೂರ್ಣಗೊಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.