ಓವರ್ಟೇಕ್ ಮಾಡುವುದನ್ನು ನಿರ್ಲಕ್ಷ್ಯದ ಕೃತ್ಯ ಎಂದು ಹೇಳಲಾಗುವುದಿಲ್ಲ ಹಾಗೂ ಹೆಚ್ಚಿನ ಪರಿಹಾರ ನಿರಾಕರಿಸುವಂತಿಲ್ಲ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯು ವಾಹನವನ್ನು ಓವರ್ಟೇಕ್ ಮಾಡಲು ಪ್ರಯತ್ನಿಸಿದ ಮಾತ್ರಕ್ಕೆ ಅದನ್ನು ದುಡುಕುತನ ಅಥವಾ ನಿರ್ಲಕ್ಷ್ಯದ ಕೃತ್ಯ ಎಂದು ಹೇಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ರಸ್ತೆ ಅಪಘಾತ ಪ್ರಕರಣದಲ್ಲಿ ಪರಿಹಾರವನ್ನು ಹೆಚ್ಚಿಸಿದೆ. 30 ವರ್ಷಗಳ ಹಿಂದೆ…

ಒಬ್ಬ ವ್ಯಕ್ತಿಯು ವಾಹನವನ್ನು ಓವರ್ಟೇಕ್ ಮಾಡಲು ಪ್ರಯತ್ನಿಸಿದ ಮಾತ್ರಕ್ಕೆ ಅದನ್ನು ದುಡುಕುತನ ಅಥವಾ ನಿರ್ಲಕ್ಷ್ಯದ ಕೃತ್ಯ ಎಂದು ಹೇಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ರಸ್ತೆ ಅಪಘಾತ ಪ್ರಕರಣದಲ್ಲಿ ಪರಿಹಾರವನ್ನು ಹೆಚ್ಚಿಸಿದೆ.

30 ವರ್ಷಗಳ ಹಿಂದೆ ಟ್ರ್ಯಾಕ್ಟರ್ ಗೆ ಮುಖಾಮುಖಿ ಡಿಕ್ಕಿ ಹೊಡೆದು ಪತ್ನಿಯನ್ನು ಕಳೆದುಕೊಂಡ ವ್ಯಕ್ತಿಯಿಂದಾಗಿ ಅಪಘಾತ ಪರಿಹಾರವನ್ನು ಹೆಚ್ಚಿಸುವಾಗ ಸುಪ್ರೀಂ ಕೋರ್ಟ್ ಭಾರತೀಯ ರಸ್ತೆಗಳಲ್ಲಿ ಓವರ್ ಟೇಕ್ ಮಾಡುವುದು “ದೈನಂದಿನ ಘಟನೆ” ಮತ್ತು ಯಾವಾಗಲೂ ದುಡುಕಿನ ಕೃತ್ಯವಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರ ನ್ಯಾಯಪೀಠವು ಪತಿಯ ನಿರ್ಲಕ್ಷ್ಯಕ್ಕೆ ಪತಿ ಕಾರಣ ಎಂಬ ಕಲ್ಪನೆಯನ್ನು ತಳ್ಳಿಹಾಕಿತು. ಮೋಟಾರು ಅಪಘಾತಗಳ ನ್ಯಾಯ ಮಂಡಳಿ ಪ್ರಕಟಿಸಿದ್ದ 1.01 ಲಕ್ಷ ರೂ. ಪರಿಹಾರವನ್ನು 11.25 ಲಕ್ಷ ರೂ.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

Vijayaprabha Mobile App free

ವ್ಯಾಪಾರಿಯಾಗಿದ್ದ ಪ್ರೇಮಲಾಲ್ ಆನಂದ್ ಮತ್ತು ಅವರ ಪತ್ನಿ ಸ್ನೇಹಿತನ ಭೇಟಿಯಾಗಲು ಬೈಕ್ ನಲ್ಲಿ ನೋಯ್ಡಾಗೆ ಪ್ರಯಾಣಿಸುತ್ತಿದ್ದಾಗ ಮೆಹರೋಲಿ ಸಮೀಪ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಪತ್ನಿ ಮೃತಪಟ್ಟು ಪ್ರೇಮಲಾಲ್ ಆನಂದ್ ಗಂಭೀರವಾಗಿ ಗಾಯಗೊಂಡಿದ್ದರು. ವ್ಯಕ್ತಿಯೊಬ್ಬ ತನ್ನ ಮುಂದಿನ ವಾಹನ ಹಿಂದಿಕ್ಕಲು ಪ್ರಯತ್ನಿಸಿದ್ದ ಮಾತ್ರಕ್ಕೆ ಅದನ್ನು ದುಡುಕಿನ ಅಥವಾ ನಿರ್ಲಕ್ಷ್ಯದ ಚಾಲನೆ ಎಂದು ಹೇಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.