Yaduveer Wodeyar and Trishika : ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿರುವ ಮೈಸೂರು ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಶಿಕಾ ದಂಪತಿಗೆ ಎರಡನೇ ಮಗು ಜನಿಸಿದೆ.
ಹೌದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ದೇವಿ ಅವರು 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮೈಸೂರು ಅರಮನೆಗೂ, ಮೈಸೂರು ಜನತೆಗೂ ದಸರಾ ಸಂಭ್ರಮ ಇದರಿಂದ ದುಪ್ಪಟ್ಟಾಗಿದೆ.
ಸೂತಕದಲ್ಲೇ ಪೂಜೆ ಮಾಡಿದರೇ ಯದುವೀರ್?
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಶಿಕಾ ದಂಪತಿಗೆ ಎರಡನೇ ಮಗು ಜನಿಸಿದೆ. ಆದರೆ ಇದೇ ಸಂದರ್ಭದಲ್ಲಿ ಯದುವೀರ್ ಅವರ ಮೇಲೆ ಗಂಭೀರ ಆರೋಪ ಬಂದಿದೆ.
ಹೌದು, ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟು ಮತ್ತು ಸಾವಿನ ನಂತರದ ಕೆಲ ದಿನಗಳನ್ನು ಸೂತಕವೆಂದು ಪರಿಗಣಿಸಲಾಗುತ್ತದೆ. ಆ ದಿನಗಳಲ್ಲಿ ಯಾವುದೇ ಪೂಜಾ ಕ್ರಿಯೆಗಳು ನಡೆಯುವುದಿಲ್ಲ. ಹೀಗಿರುವಾಗ ಯದುವೀರ್ ಸೂತಕದಲ್ಲೇ Bday ಮಾಡಿದ್ದಾರೆ, ಕಂಕಣ ತೊಟ್ಟು ಪೂಜೆ ನೆರವೇರಿಸಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.