ತೀವ್ರ ವಿರೋಧದ ನಡುವೆಯೂ ರಾಜ್ಯಾದ್ಯಂತ ಇಂದಿನಿಂದ (ಮಾರ್ಚ್ 27) 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ(ಬೋರ್ಡ್ ಪರೀಕ್ಷೆ) ನಡೆಯಲಿದೆ.
ಹೌದು, ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಂತೆಯೇ ರಾಜ್ಯ ಪಠ್ಯಕ್ರಮ ಇರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳ 5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ ಏಪ್ರಿಲ್ 1ರವರೆಗೆ ಪರೀಕ್ಷೆಗಳುನಡೆಯಲಿದ್ದು, ಇದೇ ಮೊದಲಿಗೆ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ನಡೆಯಲಿವೆ.
ಇದನ್ನು ಓದಿ: ಪಡಿತರ ಚೀಟಿ ಹೊಂದಿರುವವರಿಗೆ ಗುಡ್ ನ್ಯೂಸ್.. ಮೋದಿ ಸರ್ಕಾರ್ ಮಹತ್ವದ ನಿರ್ಧಾರ!
ಇನ್ನು, KSEAB ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದು 5 ಮತ್ತು 8ನೇ ತರಗತಿಯಾ ಸುಮಾರು 20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದೆ. ಈ ನಡುವೆ ಮಕ್ಕಳಿಗೆ ಬೋರ್ಡ್ ಪರೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯಿದೆ.
ಇದನ್ನು ಓದಿ: PPF Account: ಸರ್ಕಾರದ ಈ ಯೋಜನೆ ಲಕ್ಷಾಧಿಪತಿಗಳನ್ನಾಗಿಸುತ್ತದೆ; ಹೂಡಿಕೆ ಕಡಿಮೆ, ಬಡ್ಡಿಯೊಂದಿಗೆ ಕೋಟಿಗೂ ಹೆಚ್ಚು ಲಾಭ..!