Munirathna rape allegation: ದೂರಿನಲ್ಲಿ ಸಂತ್ರಸ್ತ ಮಹಿಳೆ ನೀಡಿರುವ ಅಂಶಗಳೇನು? FIRನಲ್ಲೇನಿದೆ?

Munirathna rape allegation: ದಲಿತರ ಮೇಲಿನ ಜಾತಿನಿಂದನೆ, ಜೀವಬೆದರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ (Munirathna) ಜಾಮೀನು ಪಡೆಯುತ್ತಿದಂತೆ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಕಗ್ಗಲಿಪುರ ಪೊಲೀಸ್‌…

Munirathna rape allegation

Munirathna rape allegation: ದಲಿತರ ಮೇಲಿನ ಜಾತಿನಿಂದನೆ, ಜೀವಬೆದರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ (Munirathna) ಜಾಮೀನು ಪಡೆಯುತ್ತಿದಂತೆ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಕಗ್ಗಲಿಪುರ ಪೊಲೀಸ್‌ ಠಾಣೆಯಲ್ಲಿ ಮಹಿಳೆಯೊಬ್ಬರು ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರವೆಸಗಿ, ಹನಿ ಟ್ರ್ಯಾಪ್ ಮಾಡಲು ಬಳಸಿಕೊಂಡಿದ್ದಾನೆ ಎಂದು ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ: ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್

Munirathna rape allegation: ಶಾಸಕ ಮುನಿರತ್ನ ಸೇರಿದಂತೆ 7 ಜನರ ಮೇಲೆ ಎಫ್ ಐ ಆರ್

ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijayaprabha Mobile App free

ಶಾಸಕ ಮುನಿರತ್ನ, ವಿಜಯ್ ಕುಮಾರ್, ಕಿರಣ್ ಕುಮಾರ್, ಸುಧಾಕರ್, ಲೋಹಿತ್ ಗೌಡ, ಮಂಜುನಾಥ, ಲೋಕಿ ಎಂಬುವರ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ 1860, 354ಸಿ ಸೇರಿದಂತೆ ವಿವಿಧ ಕಲಂಗಳ ಅಡಿ ಪ್ರಕರಣ ದಾಖಸಲಾಗಿದೆ.

ಇದನ್ನು ಓದಿ: ಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ; ಕಾರಣವೇನು?

Munirathna rape allegation: ಮಹಿಳೆ ಮುನಿರತ್ನಗೆ ಪರಿಚಯವಾಗಿದ್ದು ಹೇಗೆ..?

ಕೋವಿಡ್ ಸಂದರ್ಭದಲ್ಲಿ ನನ್ನ ಸೇವಾ ಕಾರ್ಯ ಗುರುತಿಸಿ ಕರೆ ಮಾಡಿದ್ದ ಮುನಿರತ್ನ, ನಮಸ್ತೆ ಲೀಡರ್, ನಾನು ನಿಮ್ಮ ‘ಭಾಗದ ಶಾಸಕ. ನಿಮ್ಮ ಬಗ್ಗೆ ಕೇಳಿದ್ದೀನಿ. ನನ್ನನ್ನು ಬಂದು ಭೇಟಿ ಮಾಡಿ ಎಂದಿದ್ದ. ಅದರಂತೆ, ಭೇಟಿ ಮಾಡಿದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಆಗಾಗ ವಿಡಿಯೊ ಕಾಲ್ ಮಾಡಿ ಮಾತನಾಡುತ್ತಿದ್ದರು. ನಗ್ನವಾಗಿ ಕರೆ ಮಾಡುವಂತೆ ಒತ್ತಾಯಿಸಿದಾಗ, ನಾನು ನಿರಾಕರಿಸಿದ್ದೆ ಎಂದು ಮಹಿಳೆ ಹೇಳಿದ್ದಾಳೆ

Munirathna rape allegation: ಸಂತ್ರಸ್ತ ಮಹಿಳೆ ದೂರಿನಲ್ಲಿ ನೀಡಿರುವ ಅಂಶಗಳೇನು ಗೊತ್ತಾ..?

ಕೋವಿಡ್ ಸಮಯದಲ್ಲಿ ನನ್ನ ಸೇವೆ ಗುರುತಿಸಿ ಕರೆ ಮಾಡಿದ್ದ ಮುನಿರತ್ನ. ಆಗ್ಗಾಗ್ಗೆ ವಿಡೀಯೊ ಕಾಲ್ ನಲ್ಲಿ ಮಾತನಾಡ್ತಿದ್ರು. ಈ ವೇಳೆ ನಗ್ನವಾಗಿ ಕರೆ ಮಾಡುವಂತೆ ಒತ್ತಾಯಿಸಿದಾಗ ನಾನು ನಿರಾಕರಿಸಿದ್ದೆ. ಸ್ಪಾಟ್ ವೊಂದಕ್ಕೆ ಬರೋದಕ್ಕೆ ಹೇಳಿ ನಿನ್ನ ನೋಡಿದ್ರೆ ಮೈ ಜುಮ್ಮೆನ್ನುತ್ತದೆ ಎಂದು ಹೇಳಿ ತಬ್ಬಿಕೊಳ್ಳಲು ಮುಂದಾದ್ರು.

ನಾನು ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲಾ ಕಾಮನ್ ಎಂದರು. ಅತ್ಯಾಚಾರ ವಿಡೀಯೊ ಇಟ್ಕೊಂಡು 2020 ರಿಂದ 2022 ರ ಅವಧಿಯಲ್ಲಿ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿ: ಗೃಹಲಕ್ಷ್ಮಿಯರಿಗೆ ಶಾಕಿಂಗ್‌ ಸುದ್ದಿ.. ಇವರಿಗೆ ಬರಲ್ಲ 2 ಸಾವಿರ ರೂ..!

Munirathna rape allegation: ಮುನಿರತ್ನ ಲೈಂಗಿಕ ದೌರ್ಜನ್ಯ; FIRನಲ್ಲೇನಿದೆ

  • ಕೋವಿಡ್ ಸಮಯದಲ್ಲಿ ಯುವತಿಯ ಸೇವೆ ಗುರುತಿಸಿ ಕರೆ ಮಾಡಿದ್ದ ಮುನಿರತ್ನ.
  • ಆಗಾಗ ವಿಡಿಯೋ ಕಾಲ್ ಮಾಡಿ ನಗ್ನ ವಾಗುವಂತೆ ಒತ್ತಾಯಿಸುತ್ತಿದ್ದರು.
  • ನಿನ್ನ ನೋಡಿದ್ರೆ ಮೈ ಜುಮ್ ಎನಿಸುತ್ತೆ ಎಂದು ತಬ್ಬಿಕೊಂಡರು.
  • ಒಪ್ಪಿಕೊಳ್ಳದಿದ್ದರೆ ನಿನ್ನ ಮೇಲೆ ಕಂಪ್ಲೇಂಟ್ ಮಾಡುತ್ತೇನೆ ಎಂದು ಹೆದರಿಸಿದ್ದರು.
  • ಅತ್ಯಾಚಾರದ ದೃಶ್ಯಗಳು ಸೆರೆಯಾಗಿದೆ. ವಿಡಿಯೋ ಎಡಿಟ್ ಮಾಡಿ ಹಂಚುತ್ತೇನೆ ಎಂದರು.
  • ಅತ್ಯಾಚಾರದ ವಿಡಿಯೋವನ್ನು ಟಿವಿಯಲ್ಲಿ ಹಾಕಿ ನನಗೆ ತೋರಿಸಿದ್ದಾರೆ.
  • ಗಂಡ ಮತ್ತು ಮಕ್ಕಳಿಗೆ ವಿಡಿಯೋ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದರು.
  • ವಿಡಿಯೋ ಇಟ್ಟುಕೊಂಡು ಎರಡು ವರ್ಷ ನಿರಂತರ ಅತ್ಯಾಚಾರ ಎಸಗಿದ್ದಾರೆ.

Munirathna rape allegation: ಎಚ್ಐವಿ ಸೋಂಕಿತ ಮಹಿಳೆ ಬಳಕೆ

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾರ್ಪೋರೇಟರ್ ಒಬ್ಬರ ಪತಿಗೆ ಎಚ್‌ಐವಿ ಸೋಂಕಿತ ಮಹಿಳೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿ ಆದೃಶ್ಯವನ್ನು ಚಿತ್ರೀಕರಿಸಿ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದು, ಕಾರ್ಪೋರೇಟರ್ ಮಗನಿಗೂ ಎಚ್‌ಐವಿ ಸೋಂಕಿತರೊಂದಿಗೆ ಲೈಂಗಿಕ ಸಂಪರ್ಕ ನಡೆಸುವಂತೆ ಇಲ್ಲಾ ಎಚ್‌ಐವಿ ಸೋಂಕಿತರ ರಕ್ತದ ಇಂಜೆಕ್ಷನ್ ನೀಡುವಂತೆ ನನ್ನನ್ನು ಬಲವಂತ ಮಾಡಿದ್ದರು. ಆದರೆ, ಇದಕ್ಕೆ ನಾನು ಒಪ್ಪಲಿಲ್ಲ ಎಂದು ದೂರಿನಲ್ಲಿ ಸಂತ್ರಸ್ತ ಮಹಳೆ ತಿಳಿಸಿದ್ದಾರೆ.

Munirathna rape allegation: ನಿನ್ನ ನೋಡಿದ್ರೆ ಮೈಜುಮ್‌ ಎನಿಸುತ್ತೆ ಎಂದು ತಬ್ಬಿಕೊಂಡರು ಶಾಸಕ ಮುನಿರತ್ನ

ಮಹಿಳೆ ಎಫ್ಐಆರ್ ನಲ್ಲಿ ಹಲವು ಸ್ಫೋಟಕ ಮಾಹಿತಿ ನೀಡಿದ್ದು, ಅದರಲ್ಲಿ, ಸ್ಪಾಟ್‌ವೊಂದಕ್ಕೆ ಬರೋದಕ್ಕೆ ಹೇಳಿ ನಿನ್ನ ನೋಡಿದರೆ ಮೈ ಜುಮ್‌ ಎನಿಸುತ್ತೆ ಎಂದೇಳಿ ತಬ್ಬಿಕೊಳ್ಳಲು ಮುಂದಾದರು. ನಾನು ಕಿರುಚಿಕೊಳ್ಳುತ್ತೇನೆ ಎಂದಾಗ ಶಾಸಕನಿದ್ದೇನೆ ಅಪಾರ ಜನಬೆಂಬಲವಿದೆ ಸುಮ್ಮನಿದ್ದರೆ ಸರಿ ಎಂದು ಹೆದರಿಸಿದ್ದರು.

Munirathna rape allegation: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ

ಮಹಿಳೆಯೊಬ್ಬರನ್ನು ತಮ್ಮ ಟ್ರಾಪ್‌ಗೆ ಸಿಕ್ಕಿಸಲು ಕಗ್ಗಲಿಪುರ ಠಾಣೆ ವ್ಯಾಪ್ತಿಯ ಗುಹಾಂತರ ರೆಸಾರ್ಟ್, ಚಿಕ್ಕಬಳ್ಳಾಪುರ ಸಮೀಪದ ಹಲಗುರಕಿ ರೆಸಾರ್ಟ್‌ಗೆ ಆರೋಪಿಗಳು ನಮ್ಮೊಂದಿಗೆ ತೆರಳಿ, ಅಲ್ಲಿ ಮಹಿಳೆಯೊಬ್ಬರಿಗೆ ಮದ್ಯ ಸೇವನೆ ಮಾಡಿಸಿ, ಆಕೆಯ ಸ್ವಿಮ್ಮಿಂಗ್ ದಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದರು.

ಬಳಿಕ ಆ ಮಹಿಳೆಯ ವಿರುದ್ಧ ಲೋಕಿ ಎಂಬ ವ್ಯಕ್ತಿಯಿಂದ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ದೂರು ಕೊಡಿಸಿ, ಬಳಿಕ ಆ ಮಹಿಳೆಯನ್ನು ಪೊಲೀಸರು ಬಂದಿಸುವಂತೆ ಮಾಡಿ, ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.