Munirathna arrested : ಜಾತಿ ನಿಂದನೆ, ಬೆದರಿಕೆ ಕೇಸ್‌ನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬಿಜೆಪಿ ಶಾಸಕ ಮುನಿರತ್ನ(Munirathna) ಅವರನ್ನು ರಾಮನಗರದ ಕಗ್ಗಲೀಪುರ ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು, ಜಾತಿ ನಿಂದನೆ, ಭ್ರಷ್ಟಾಚಾರ ಸಂಬಂಧ ಅರೆಸ್ಟ್ ಆಗಿದ್ದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ನಿನ್ನೆಯಷ್ಟೇ ಜಾಮೀನು ದೊರೆತ್ತಿತ್ತು. ಆದರೆ, ಅತ್ಯಾಚಾರ, ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಬೇಕಾಗಿದ್ದು, ಪರಪ್ಪನ ಅಗ್ರಹಾರದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ; ಇವರ ಮಾಸಾಶನ 3 ಸಾವಿರ ರೂಗೆ ಹೆಚ್ಚಳ
Munirathna arrested : ಮುನಿರತ್ನ ಮತ್ತೆ ಅರೆಸ್ಟ್: ಕಾರಣವೇನು?
ಮುನಿರತ್ನ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಗೆ ಮತ್ತೊಂದು ದೂರು ದಾಖಲಾಗಿತ್ತು. ಮಹಿಳೆಯೊಬ್ಬರು ಖುದ್ದು ಠಾಣೆಗೆ ಬಂದು ಅತ್ಯಾಚಾರ ಕೇಸ್ ದಾಖಲಿಸಿದ್ದು, ಖಾಸಗಿ ರೆಸಾರ್ಟ್ ನಲ್ಲಿ ನನ್ನ ವಿರುದ್ಧ ಅತ್ಯಾಚಾರವಾಗಿದೆ ಎಂದು ಸಂತ್ರಸ್ತೆ ಏಳು ಜನರ ವಿರುದ್ಧ ದೂರು ದಾಖಲಿಸಿದ್ದರು.
ಅದರಲ್ಲಿ ಶಾಸಕ ಮುನಿರತ್ನ A1 ಆರೋಪಿಯಾಗಿದ್ದು, ವಿಜಯ್ ಕುಮಾರ್, ಸುಧಾಕರ್, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ್ ಹಾಗೂ ಲೋಕಿ ಎಂಬುವರ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣದ ತನಿಖೆ ಆರಂಭಿಸಿರುವ ಕಗ್ಗಲೀಪುರ ಪೊಲೀಸರು ಮುನಿರತ್ನ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ವಯಸ್ಸು ಕೇವಲ 20 -25 ವರ್ಷ ಈಗಲೇ ಕೂದಲು ಉದುರುವಿಕೆ ಪ್ರಾರಂಭ!; ಏನು ಮಾಡುವುದು?