ಅಬುದಾಬಿ : ಐಪಿಎಲ್ 2020 ರ 13ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಶೇಖ್ ಜಾಯೆದ್ ಸ್ಟೇಡಿಯಂ ನಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 48 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮುಂಬೈ ಇಂಡಿಯನ್ಸ್ ತಂಡ ನೀಡಿದ 192 ರನ್ ಗಳ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಂಬೈ ಬೌಲರ್ ಗಳ ಸಾಂಘಿಕ ಹೋರಾಟದಿಂದ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿ 47 ರನ್ ಗಳ ಅಂತರದಿಂದ ಸೋಲನುಭವಿಸಿತು.
ಪಂಜಾಬ್ ಪರ ನಾಯಕ ರಾಹುಲ್ (17 ರನ್, 19 ಎಸೆತ), ಮಾಯಾಂಕ್ ಅಗರ್ವಾವಾಲ್ (25 ರನ್, 18 ಎಸೆತ), ನಿಕೊಲಸ್ ಪೂರನ್(44 ರನ್, 27 ಎಸೆತ) ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ತಂಡದ ಪರ ಬುಮ್ರಾ, ಚಾಹರ್, ಪ್ಯಾಟಿನ್ಸನ್ ತಲಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಇನ್ನು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಆಟಗಾರ ನಾಯಕ ರೋಹಿತ್ ಶರ್ಮಾ ( 70 ರನ್, 45 ಎಸೆತ), ಇಶಾನ್ ಕಿಶನ್ ( 28 ರನ್, 32 ಎಸೆತ ) ಪೊಲಾರ್ಡ್ (47 ರನ್, 20 ಎಸೆತ), ಹಾರ್ದಿಕ್ ಪಾಂಡ್ಯ (30 ರನ್, 11 ಎಸೆತ ) ಅವರ ಭರ್ಜರಿ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು. ಪಂಜಾಬ್ ಪರ ಶಮಿ, ಕಾಟ್ರೆಲ್, ಕೆ. ಗೌತಮ್ ತಲಾ 1 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ತಂಡದ ಪರ 20 ಎಸೆತಗಳಲ್ಲಿ ಭರ್ಜರಿ 47 ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಕಿರಣ್ ಪೊಲಾರ್ಡ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ನಮ್ಮ ಜೀವನದ ಒಂದು ಭಾಗವಾದ ನೀರಿನ ಅತ್ಯದ್ಭುತ ಪ್ರಯೋಜನಗಳು