ಚೆನ್ನೈ : ಆಭರಣ ವ್ಯಾಪಾರಿ ಮನೆಯೊಂದಕ್ಕೆ ನುಗ್ಗಿ ತಾಯಿ ಮತ್ತು ಮಗನನ್ನು ಅಮಾನುಷವಾಗಿ ಕೊಂದು 16 ಕೆಜಿ ಚಿನ್ನವನ್ನು ದೋಚಿದ ಘಟನೆ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ಬುಧವಾರ ಬೆಳಿಗ್ಗೆ ಮೈಲಾಡುತುರೈ ಜಿಲ್ಲೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ನಾಲ್ಕು ಗಂಟೆಗಳಲ್ಲಿ ಭೇದಿಸಿದ್ದಾರೆ. ಪೊಲೀಸ್ ಶೂಟಿಂಗ್‌ನಲ್ಲಿ ಓರ್ವ ಶಂಕಿತ ಸಾವನ್ನಪ್ಪಿದ್ದು, ಇನ್ನಿಬ್ಬರನ್ನು ಬಂಧಿಸಲಾಗಿದೆ.
ಪೊಲೀಸ್ ವರದಿಯ ಪ್ರಕಾರ, ಮಾಯಿಲಾಡುತುರೈ ಜಿಲ್ಲೆಯ ಧರ್ಮಕುಲಂನ ಸಿರ್ಕಾಲಿ ನಿವಾಸಿ ಧನರಾಜ್ ಚೌಧರಿ ಸ್ಥಳೀಯ ರೈಲ್ವೆ ರಸ್ತೆಯಲ್ಲಿ ಚಿನ್ನದ ಆಭರಣ ಮಳಿಗೆ ನಡೆಸುತ್ತಿದ್ದಾರೆ. ಬುಧವಾರ ಬೆಳಿಗ್ಗೆ 6.30 ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಧನರಾಜ್ ಅವರ ಮನೆಗೆ ನುಗ್ಗಿದ್ದಾರೆ. ವ್ಯಾಪಾರಿ ಮನೆಯ ಬಾಗಿಲು ಕೊಲೆಗಡುಕರು ಬಡಿದಾಗ ಧನರಾಜ್ ಹೋಗಿ ಬಾಗಿಲು ತೆರೆದಿದ್ದಾರೆ. ಅಷ್ಟರಲ್ಲೇ, ಆತನ ಮೇಲೆ ಹಲ್ಲೆ ನಡೆಸಿ ಮನೆಯೊಳಗೆ ನುಗ್ಗಿ ಧನರಾಜ್ ಪತ್ನಿ ಆಶಾ (48) ಮತ್ತು ಮಗ ಅಖಿಲ್ (25) ಗೆ ಕತ್ತಿಯಿಂದ ಇರಿದು ಸಾಯಿಸಿದ್ದಾರೆ. ತಡೆಯಲು ಹೋದ ಧನರಾಜ್ ಅವರ ಸೊಸೆ ನೇಹಾಲ್ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ. ಆನಂತರ ಮನೆಯಲ್ಲಿದ್ದ 17 ಕೆಜಿ ಚಿನ್ನ ಮತ್ತು ಮನೆಯಿಂದ ಸಿಸಿಟಿವಿ ತುಣುಕನ್ನು ಹೊಂದಿರುವ ಹಾರ್ಡ್ ಡಿಸ್ಕ್ ಹೊತ್ತುಕೊಂಡು ವ್ಯಾಪಾರಿ ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಧನರಾಜ್ ಅವರ ಪತ್ನಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ಕೊಲೆಗಡುಕರನ್ನು ಹಿಡಿಯಲು ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು. ಮೇಳಮತೂರು ಪ್ರದೇಶದಲ್ಲಿ ಕಾರು ನಿಲ್ಲಿಸಿ ವಾಹನದಿಂದ ಇಳಿದು ಹೊಲಗಳಿಗೆ ಪಲಾಯನ ಮಾಡುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರುಕುರ್ರಾದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುವಾಗ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಪೊಲೀಸರು ಗುಂಡು ಹಾರಿಸಿದಾಗ ಮಹಿಪಾಲ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ಮನೀಶ್ (23) ಮತ್ತು ರಮೇಶ್ ಪಟೇಲ್ (20) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ರಾಜಸ್ಥಾನದ ಮತ್ತೊಬ್ಬ ಆರೋಪಿಯನ್ನು ಬುಧವಾರ ಸಂಜೆ ಕರ್ಣರಾಮ್ ಕುಂಬಕೋಣಂನಲ್ಲಿ ಬಂಧಿಸಲಾಗಿದೆ.
ಅವರಿಂದ 16 ಕೆಜಿ ಚಿನ್ನ ಮತ್ತು 2 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿ ಕರ್ಣರಾಮ್ ಎಂಬ ವ್ಯಕ್ತಿಗೆ ಭಲೆ ಬೀಸಿದ್ದಾರೆ. ಧನರಾಜ್ ಚೌಧರಿ ರಾಜಸ್ಥಾನ ಮೂಲದವರಾಗಿದ್ದು, ಸಿರ್ಕಲಿಯಲ್ಲಿ ನೆಲೆಸಿದ್ದರು. ಧನರಾಜ್ ಚೌಧರಿ ಅವರ ಮಗ ಅಖಿಲ್ ಒಂದು ವರ್ಷದ ಹಿಂದೆಯೇ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ಮನೆಯೊಳಗೆ ನುಗ್ಗಿದ ಆರೋಪಿಗಳು ಮನೆಯಲ್ಲಿರುವ ಎಲ್ಲಾ ಆಭರಣಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಆಶಾ, ಅಖಿಲ್ ಕತ್ತು ಕೊಯ್ದು ಮನೆಯಲ್ಲಿರುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ದಾಳಿಯಲ್ಲಿ ಗಾಯಗೊಂಡ ನೆಹಾಲ್ ನೆರೆಹೊರೆಯವರನ್ನು ಎಚ್ಚರಿಸಿದ್ದು, ಅಲ್ಲಿಗೆ ಬಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.