ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆಯ ಕೊರತೆಯ ಮಧ್ಯೆ ಆಘಾತಕಾರಿ ಸುದ್ದಿಯೊಂದು ಬಂದಿದ್ದು, ಏಪ್ರಿಲ್ 11 ರವರೆಗೆ ದೇಶದಲ್ಲಿ ಶೇ.23ರಷ್ಟು ಕರೋನ ಲಸಿಕೆಗಳು ಹಾಳಾಗಿವೆ ಎಂಬ ಮಾಹಿತಿ ಆರ್ ಟಿಐ ಅರ್ಜಿಯಿಂದ ಬಹಿರಂಗವಾಗಿದೆ.
ಹೌದು, ಏಪ್ರಿಲ್ 11 ರವರೆಗೆ ರಾಜ್ಯಗಳಲ್ಲಿ ಬಳಸಲಾದ ಒಟ್ಟು 10.34 ಕೋಟಿ ಲಸಿಕೆಗಳ ಪೈಕಿ 44.78 ಲಕ್ಷಕ್ಕಿಂತಲೂ ಅಧಿಕ ಲಸಿಕೆಗಳು ಹಾಳಾಗಿವೆ ಎಂದು ತಿಳಿದುಬಂದಿದ್ದು, ರಾಜಸ್ಥಾನದಲ್ಲಿ 6 ಲಕ್ಷಕ್ಕಿಂತ ಹೆಚ್ಚು ಡೋಸ್ ಹಾಳಾಗಿದ್ದರೆ, ಕರ್ನಾಟಕದಲ್ಲಿ 2 ಲಕ್ಷಕ್ಕೂ ಅಧಿಕ ಡೋಸ್ ಹಾಳಾಗಿವೆ ಎನ್ನಲಾಗಿದೆ.
ಯಾವ ರಾಜ್ಯದಲ್ಲಿ ಎಷ್ಟು ಡೋಸ್ ಹಾಳಾಗಿವೆ?
ಆಂಧ್ರಪ್ರದೇಶ – 1,17,733, ಅಸ್ಸಾಂ – 1,23, 818, ಬಿಹಾರ್ – 3,37,769, ಛತ್ತೀಸ್ ಗಢ – 1.45 ಲಕ್ಷ, ದೆಹಲಿ – 1.35 ಲಕ್ಷ, ಗುಜರಾತ್ – 3.56 ಲಕ್ಷ, ಹರ್ಯಾಣ – 2,46,462, ಜಮ್ಮು ಮತ್ತು ಕಾಶ್ಮೀರ – 90,619, ಜಾರ್ಖಂಡ್ – 63,235, ಕರ್ನಾಟಕ – 2,14,842, ಮಧ್ಯ ಪ್ರದೇಶ – 81,535, ಮಹಾರಾಷ್ಟ್ರ – 3,56,725, ಒಡಿಶಾ – 1,41,811, ಪಂಜಾಬ್ – 1,56,423, ರಾಜಸ್ಥಾನ್ – 6,10,551, ತಮಿಳುನಾಡು – 5,04,724, ತೆಲಂಗಾಣ – 1,68,302, ತ್ರಿಪುರ – 43,292, ಉತ್ತರ ಪ್ರದೇಶ – 4,99,115 ಮತ್ತು ಉತ್ತರಾಖಂಡ್ ನಲ್ಲಿ 51,956 ಡೋಸ್ ಹಾಳಾಗಿವೆ ಎಂದು ತಿಳಿದುಬಂದಿದೆ.