ನವದೆಹಲಿ: ಕೇಂದ್ರ ಸರ್ಕಾರವು ರೈತರಿಗಾಗಿ ಬಹಳ ಮಹತ್ವಾಕಾಂಕ್ಷೆಯ ಪಿಎಂ ಕಿಸಾನ್ ಸಮ್ಮನ್ ಯೋಜನೆಯನ್ನು ತಂದಿದ್ದು, ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕವಾಗಿ 6,000 ರೂ. ಗಳನ್ನೂ 2,000 ರೂಗಳಂತೆ ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗುತ್ತದೆ. ಆದರೆ, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಕೆಲವು ಜನರು ಅಡ್ಡದಾರಿ ತುಳಿಯುವ ಮೂಲಕ ಹಣ ಪಡೆದುಕೊಂಡಿದ್ದು, ಈ ವಿಷಯ ಕೇಂದ್ರ ಸರ್ಕಾರಕ್ಕೂ ತಲುಪಿದೆ.
ಇದರೊಂದಿಗೆ ಕೇಂದ್ರ ಸರ್ಕಾರ ಅರ್ಹತೆ ಪಡೆಯದೆ ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆದವರಿಂದ ಮತ್ತೆ ಹಣ ಹಿಂಪಡೆಯುತ್ತಿದೆ. ಅರ್ಹತೆ ಇಲ್ಲದಿದ್ದರೂ ಸುಮಾರು 33 ಲಕ್ಷ ಜನರು ಹಣವನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಈಗ ಕೇಂದ್ರ ಸರ್ಕಾರ ಅವರೆಲ್ಲರಿಂದ ಪಿಎಂ ಕಿಸಾನ್ ಹಣವನ್ನು ಹಿಂತೆಗೆದುಕೊಳ್ಳುತ್ತಿದೆ.
ಮೋದಿ ಸರ್ಕಾರ ಹಣ ವಸೂಲಾತಿಯನ್ನು ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಿದೆ. ರಾಜ್ಯ ಸರ್ಕಾರಗಳು ಹಣವನ್ನು ಸಂಗ್ರಹಿಸುತ್ತವೆ. ಸುಮಾರು 2,326 ಕೋಟಿ ರೂ. ರೈತರಿಂದ ಹಿಂಪಡೆಯಬೇಕಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬಹಿರಂಗಪಡಿಸಿದ್ದಾರೆ.
ಕೆಲವು ತೆರಿಗೆದಾರರು ಕೂಡ ಪಿಎಂ ಕಿಸಾನ್ ಯೋಜನೆಯಲ್ಲಿ ಹಣವನ್ನು ಪಡೆದಿದ್ದು, ಪಿಎಂ ಕಿಸಾನ್ ಅರ್ಹತೆ ಇಲ್ಲದವರಿಗೆ ಕೂಡ ಜಿಲ್ಲೆಯ ಅಧಿಕಾರಿಗಳು ಹಣವನ್ನು ಒದಗಿಸಿದ್ದಾರೆ ಎಂದು ನರೇಂದ್ರ ಸಿಂಗ್ ತೋಮರ್ ಅವರು ಹೇಳಿದ್ದಾರೆ. ತಮಿಳುನಾಡು ಮತ್ತು ಕರ್ನಾಟಕ ಹೆಚ್ಚಿನ ಜನರಿಗೆ ಅರ್ಹತೆ ಇಲ್ಲದೆ ಹಣ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಈಗೆ ಅರ್ಹತೆ ಇಲ್ಲದೆ ಹಣ ಪಡೆದವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ.