ಬೆಂಗಳೂರು: ಕೃಷಿ ಮಸೂದೆ ಕಾಯ್ದೆ ವಿರೋಧಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಚಲೋ ರಾಜಭವನ ಚಳುವಳಿ ವಿರೋಧಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಶ್ರೀರಾಮುಲು, ದಶಕಗಳವರೆಗೆ ದೇಶವನ್ನಾಳಿದ ಕಾಂಗ್ರೆಸ್ ಪ್ರತಿ ಚುನಾವಣೆ ಬಂದಾಗಲೂ ರೈತರ ಕಲ್ಯಾಣ ಎಂದು ಬೊಗಳೆ ಬಿಟ್ಟಿತೇ ಹೊರತು ಕಾರ್ಯರೂಪಕ್ಕೆ ತರಲಿಲ್ಲ. ಆದರೆ, ಶ್ರೀ ನರೇಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬೆಳೆಗಳಿಗೆ ಶೇ.43 ಬೆಂಬಲ ಬೆಲೆ ಹೆಚ್ಚಿಸಿದೆ, ನೀರಾವರಿ ವ್ಯವಸ್ಥೆ ಶೇ.45ರಷ್ಟು ಜಾಸ್ತಿ ಮಾಡಿದೆ.
ವಿನಾಕಾರಣ ಕಾಂಗ್ರೆಸ್ ಕೃಷಿ ಕಾಯ್ದೆ ವಿರೋಧಿಸುತ್ತಿದೆ, ಸುಳ್ಳು ಹೇಳುತ್ತಿದೆ. ಎಪಿಎಂಸಿ ಸುಧಾರಣೆಯಿಂದ ಬ್ಯಾಡಗಿ ಮೆಣಸಿನಕಾಯಿಗೆ ಭಾರಿ ಬೆಲೆ ಬಂದಿದೆ, ರಾಯಚೂರಿನ ಸಾವಿರಾರು ರೈತರು ಬೆಂಬಲ ಬೆಲೆಗಿಂತ ಹೆಚ್ಚಿನ ದರಕ್ಕೆ ಭತ್ತ ಮಾರಿದ್ದಾರೆ. ಅನ್ನದಾತರಿಗೆ ಹೆಚ್ಚಿನ ಬೆಲೆ ಸಿಗುವುದು ಬೇಡವೇ ರಾಜ್ಯ ಕಾಂಗ್ರೆಸ್ ?
ದಿಲ್ಲಿಯಿಂದ ಒಂದು ರೂ. ಬಿಡುಗಡೆಯಾದರೆ, ಅದು ಹಳ್ಳಿ ತಲುಪುವ ವೇಳೆ 15 ಪೈಸೆಯಾಗುತ್ತದೆ ಎಂದು ಇದೇ ಕಾಂಗ್ರೆಸ್ಸಿನ ರಾಜೀವ್ ಗಾಂಧಿಯವರು ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಶ್ರೀ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ರೈತರ ಖಾತೆಗೆ 6 ಸಾವಿರ ರೂ. ನೇರವಾಗಿ ಜಮೆಯಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿಕಾರಿದ್ದಾರೆ.
ವಿನಾಕಾರಣ ಕಾಂಗ್ರೆಸ್ ಕೃಷಿ ಕಾಯ್ದೆ ವಿರೋಧಿಸುತ್ತಿದೆ, ಸುಳ್ಳು ಹೇಳುತ್ತಿದೆ. ಎಪಿಎಂಸಿ ಸುಧಾರಣೆಯಿಂದ ಬ್ಯಾಡಗಿ ಮೆಣಸಿನಕಾಯಿಗೆ ಭಾರಿ ಬೆಲೆ ಬಂದಿದೆ, ರಾಯಚೂರಿನ ಸಾವಿರಾರು ರೈತರು ಬೆಂಬಲ ಬೆಲೆಗಿಂತ ಹೆಚ್ಚಿನ ದರಕ್ಕೆ ಭತ್ತ ಮಾರಿದ್ದಾರೆ. ಅನ್ನದಾತರಿಗೆ ಹೆಚ್ಚಿನ ಬೆಲೆ ಸಿಗುವುದು ಬೇಡವೇ @INCKarnataka?#CongressBetrayedFarmers
— B Sriramulu (@sriramulubjp) January 20, 2021




