Minimum wage : ಕಾರ್ಮಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಅಸಂಘಟಿತ ಕಾರ್ಮಿಕರ ವಲಯದವರನ್ನು ಬೆಂಬಲಿಸಲು ವೇರಿಯಬಲ್ ತುಟ್ಟಿಭತ್ಯೆ(VDA) ಪರಿಷ್ಕರಿಸುವ ಮೂಲಕ ಕನಿಷ್ಠ ವೇತನ ದರಗಳಲ್ಲಿ ಹೆಚ್ಚಳವನ್ನು ಘೋಷಿಸಿದೆ.
ಹೌದು, ಕೇಂದ್ರ ಸರ್ಕಾರ ಅ.1ರಿಂದ ಅನ್ವಯವಾಗುವಂತೆ ಕನಿಷ್ಠ ವೇತನ ದರದಲ್ಲಿ ಹೆಚ್ಚಳ ಮಾಡುವ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ದಸರಾ ಗಿಫ್ಟ್ ನೀಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆ ವೇತನದಲ್ಲಿ1035ರೂ.ವರೆಗೆ ಏರಿಕೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಜುಲೈ, ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ?
Minimum wage : ಕಾರ್ಮಿಕರ ಕನಿಷ್ಠ ವೇತನ ಪಟ್ಟಿ
ಅದರಂತೆ ಕಟ್ಟಡ ನಿರ್ಮಾಣ, ಗುಡಿಸುವುದು, ಸ್ವಚ್ಛಗೊಳಿಸುವಿಕೆ, ಲೋಡಿಂಗ್ & ಅನ್‌ಲೋಡಿಂಗ್ ಕೆಲಸಗಳನ್ನು ಮಾಡುವ ಕೌಶಲ್ಯರಹಿತ ಕಾರ್ಮಿಕರ ಕೂಲಿ ದರವು ದಿನಕ್ಕೆ ₹783 (₹20,358/ತಿಂಗಳಿಗೆ), ಅರೆ-ಕುಶಲ ಕಾರ್ಮಿಕರಿಗೆ ₹868/ದಿನ (₹22,658/ತಿಂಗಳಿಗೆ) & ನುರಿತ ಕಾರ್ಮಿಕರಿಗೆ ಪ್ರತಿದಿನಕ್ಕೆ ಕ್ರಮವಾಗಿ ₹954 ಮತ್ತು ₹1,035 (₹24,804/ತಿಂಗಳಿಗೆ) ಹೆಚ್ಚಿಸಲಾಗಿದೆ. ಇದು ಕಟ್ಟಡ, ಕೃಷಿ, ಸ್ವಚ್ಛತೆ ಸೇರಿ ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಲಿದೆ.
ಇದನ್ನೂ ಓದಿ: ನಿಮ್ಮ ಖಾತೆಗೆ ₹2,000.. ದಿನಾಂಕ ಫಿಕ್ಸ್!