ಈ ವರ್ಷದ ಹಣಕಾಸು ವರ್ಷ ಮುಗಿಯುತ್ತಿದ್ದಂತೆ ಪ್ಯಾನ್ ಕಾರ್ಡ್(PAN Card )-ಆಧಾರ್ ಕಾರ್ಡ್(Aadhaar Card) ಲಿಂಕ್ ಗಡುವು ಸಹ ಮಾರ್ಚ್ 31ರಂದು ಕೊನೆಗೊಳ್ಳುತ್ತದೆ. ಕೇಂದ್ರ ಸರ್ಕಾರ ಈಗಾಗಲೇ ಪ್ಯಾನ್ ಕಾರ್ಡ್ -ಆಧಾರ್ ಕಾರ್ಡ್ ಲಿಂಕ್ (PAN Card Link with Aadhaar Card)ಮಾಡಲು ಹಲವು ಬಾರಿ ಡೆಡ್‌ಲೈನ್ ವಿಸ್ತರಿಸಿದೆ.
ಇದನ್ನು ಓದಿ: 500ರೂ ನೋಟು ನಕಲಿ ಅಥವಾ ಅಸಲಿ ಎಂದು ಗುರುತಿಸುವುದು ಹೇಗೆ? ಈ ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಿ
ಆದರೆ, ಈ ಬಾರಿ ಕೊನೆಯ ಅವಕಾಶ. ಅಷ್ಟರಲ್ಲಿ 1,000ರೂ ದಂಡ ಕಟ್ಟಿ ಪ್ಯಾನ್ ಕಾರ್ಡ್ -ಆಧಾರ್ ಕಾರ್ಡ್ ಲಿಂಕ್ ಮಾಡಿ. ಇಲ್ಲದಿದ್ದರೆ ಪ್ಯಾನ್ ಕಾರ್ಡ್ ನಂತರ ಕೆಲಸ ಮಾಡುವುದಿಲ್ಲ. ಇದರಿಂದ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ITR ಫೈಲ್ ಮಾಡಲು ಆಗುವುದಿಲ್ಲ. TDS ಹೆಚ್ಚು ಕಡಿತವಾಗುತ್ತದೆ. ಪ್ಯಾನ್, ಆಧಾರ್ ಲಿಂಕ್‌ಗಾಗಿ https://www.incometax.gov.in/iec/foportal/ ಇಲ್ಲಿ ಕ್ಲಿಕ್ ಮಾಡಿ.
ಇವರಿಗೆ ಪ್ಯಾನ್-ಆಧಾರ್ ಲಿಂಕ್ ಕಡ್ಡಾಯವಲ್ಲ..!!!
ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಂಕ್ (PAN Card Link with Aadhaar Card ಮಾಡಲು ಮಾರ್ಚ್ 31 ಕೊನೆಯ ದಿನವಾಗಿದೆ. ಈಗಾಗಲೇ ಲಿಂಕ್ ಮಾಡಿರುವವರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸರ್ವರ್ ಡೌನ್ ಆಗುತ್ತಿರುವ ಹಿನ್ನೆಲೆ ಲಿಂಕ್ ಮಾಡುವವರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಪ್ಯಾನ್ -ಆಧಾರ್ ಕಾರ್ಡ್ ಲಿಂಕ್ ಮಾಡಲು ಕೆಲವರಿಗೆ ವಿನಾಯಿತಿ ನೀಡಲಾಗಿದೆ.
ಇದನ್ನು ಓದಿ: CRPF ನಲ್ಲಿ 9,212 ಕಾನ್ಸ್‌ಟೇಬಲ್ ಹುದ್ದೆಗಳು; SSLC ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ
ಹೌದು, ಅಸ್ಸಾಂ, ಜಮ್ಮು-ಕಾಶ್ಮೀರ, ಮೇಘಾಲಯದ ನಿವಾಸಿಗಳಿಗೆ ಆಧಾರ್- ಪ್ಯಾನ್ ಜೋಡಣೆ ಕಡ್ಡಾಯವಲ್ಲ (Aadhaar- PAN linking is not mandatory).1961 ರ ಆದಾಯ ತೆರಿಗೆ ಇಲಾಖೆಯ ಪ್ರಕಾರ ಅನಿವಾಸಿ ಭಾರತೀಯ(ಎನ್ಆರ್ ಐ) ರಿಗೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ. ಕಳೆದ ವರ್ಷದ ಅವಧಿಯಲ್ಲಿ 80 ವರ್ಷ ಅಥವಾ ಅದಕ್ಕಿಂತಲೂ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ, ಅಂತಹ ವ್ಯಕ್ತಿಗಳ ಆಧಾರ್- ಪ್ಯಾನ್ ಜೋಡಣೆ ಕಡ್ಡಾಯವಾಗಿರುವುದಿಲ್ಲ. ಭಾರತದ ಪ್ರಜೆಯಲ್ಲದ ವ್ಯಕ್ತಿಗೆ ಪ್ಯಾನ್- ಆಧಾರ್ ಜೋಡಣೆ ಕಡ್ಡಾಯವಲ್ಲ.
ಇದನ್ನು ಓದಿ: ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಒಂದೇ ಕನೆಕ್ಷನ್‌ನಲ್ಲಿ 2 ಸಿಮ್‌ಗಳು, ಉಚಿತ DTH, OTT, ಅನಿಯಮಿತ ಡೇಟಾ!