ಆಯುಷ್ ಇಲಾಖೆ ನೇಮಕಾತಿ 2023: ಆಯುಷ್ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಗುತ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಆಯುಷ್ ಇಲಾಖೆ ಹಾಸನದಲ್ಲಿ, ಸಮುದಾಯ ಆರೋಗ್ಯ ಅಧಿಕಾರಿ, ಫಾರ್ಮಸಿಸ್ಟ್ ಮತ್ತು ಸ್ಪೆಷಲಿಸ್ಟ್ ವೈದ್ಯರ ಹುದ್ದೆಗಳು ಸೇರಿದಂತೆ ಒಟ್ಟು 18 ವಿವಿದ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಯುಷ್ ಇಲಾಖೆ ಹಾಸನ ಅಧಿಕೃತ ವೆಬ್‌ಸೈಟ್ www.hassan.nicin ಭೇಟಿ ನೀಡಿ, ಏಪ್ರಿಲ್ 19, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಇದನ್ನು ಓದಿ: ಗಮನಿಸಿ: ಪ್ಯಾನ್-ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ಅವಕಾಶ; ಇವರಿಗೆ ಮಾತ್ರ ಕಡ್ಡಾಯವಲ್ಲ..!
ಹುದ್ದೆಗಳ ಸಂಪೂರ್ಣ ವಿವರ
ಒಟ್ಟು ಹುದ್ದೆಗಳು: ಹಲವಾರು ಹುದ್ದೆಗಳು
ಹುದ್ದೆಗಳ ಹೆಸರು : ತಜ್ಞ ವೈದ್ಯರು, ಫಾರ್ಮಸಿಸ್ಟ್, ಮಸಾಜಿಸ್ಟ್, ಕ್ಷರಸೂತ್ರ ಅಟೆಂಡರ್, ಸ್ತ್ರೀರೋಗ ಅಟೆಂಡರ್, ವಿವಿಧೋದ್ದೇಶ ಕಾರ್ಯಕರ್ತ, ಸಮುದಾಯ ಆರೋಗ್ಯ ಅಧಿಕಾರಿ
ವಿದ್ಯಾರ್ಹತೆ: BNYS, BAMS, MD, MS, ಸ್ನಾತಕೋತ್ತರ ಪದವಿ, 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು
ಸಂಬಳ: ಹುದ್ದೆಗಳಿಗೆ ಅನುಗುಣವಾಗಿ 10000 ದಿಂದ 35,000/- ರೂಪಾಯಿಗಳು ತಿಂಗಳಿಗೆ
ಅಪ್ಲೈ ಮಾಡುವ ವಿಧಾನ: ಆಫ್’ಲೈನ್ (ಪೋಸ್ಟ್ ಆಫೀಸ್ ಮೂಲಕ)
ಆಯ್ಕೆ ಮಾಡುವ ವಿಧಾನ: ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
ಅರ್ಜಿ ಸಲ್ಲಿಸಲು ಕೊನೆಯ ದಿನ: 19-ಏಪ್ರಿಲ್-2023
ಇದನ್ನು ಓದಿ: 500ರೂ ನೋಟು ನಕಲಿ ಅಥವಾ ಅಸಲಿ ಎಂದು ಗುರುತಿಸುವುದು ಹೇಗೆ? ಈ ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಿ
ಹೆಚ್ಚಿನ ಮಾಹಿತಗಾಗಿ
ಇಲಾಖೆಯ ಅಧಿಕೃತ ವೆಬ್ ಸೈಟ್ : https://hassan.nic.in/
ಹುದ್ದೆಗಳ ನೇಮಕಾತಿ ಅಧಿಸೂಚನೆ: https://cdn.s3waas.gov.in/s386b122d4358357d834a87ce618a55de0/uploads/2023/03/2023031876.pdf
ಹುದ್ದೆಗಳ ಅರ್ಜಿ ಸಲ್ಲಿಕೆ ಫಾರಂ : https://drive.google.com/file/d/1e6PdYq52qWx0Gj6CohJcy4F4_YbWwj_W/view
ಇದನ್ನು ಓದಿ: CRPF ನಲ್ಲಿ 9,212 ಕಾನ್ಸ್‌ಟೇಬಲ್ ಹುದ್ದೆಗಳು; SSLC ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ